

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 10ನೇ ವಾರಕ್ಕೆ ಕಾಲಿಟ್ಟಿದ್ದು, 9ನೇ ವಾರದಲ್ಲಿ ಮನೆಯಿಂದ ಯಾರು ಎಲಿಮಿನೇಟ್ ಆಗಿ ಹೊರ ಹೋಗ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ತೀವ್ರವಾಗಿ ಮೂಡಿತ್ತು. ಆದ್ರೆ, ಈ ವೇಳೆ ಇಷ್ಟು ಸೀಸನ್ಗಳ ಪೈಕಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ನಾಮಿನೇಟೆಡ್ ಆಗಿ ಕುಳಿತ್ತಿದ್ದ ಇಬ್ಬರು ಘಟಾನುಘಟಿ ಸ್ಪರ್ಧಿಗಳನ್ನು ಸೇವ್ ಮಾಡುವ ಮೂಲಕ ಮನೆಯಲ್ಲಿ ಮುಂದುವರಿಯಲು ಬಿಗ್ ಅವಕಾಶವನ್ನು ಕೊಟ್ಟಿದ್ದಾರೆ.
ಈ ವಾರ ಮನೆಯೊಳಗಿನ ಟಾಪ್ ಸ್ಪರ್ಧಿಗಳೇ ನಾಮಿನೇಷನ್ನ ಹಾಟ್ ಸೀಟ್ನಲ್ಲಿ ಕುಳಿತ್ತಿದ್ದರು ಎಂಬುದು ವೀಕ್ಷಕರಲ್ಲಿ ಭಾರೀ ಗೊಂದಲ ಮೂಡಿಸಿತ್ತು. ಭಾನುವಾರದ ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ ಮೊದಲಿಗೆ ವಿನಯ್ ಮತ್ತು ಸಂಗೀತಾ ಅವರನ್ನು ಸೇಫ್ ಮಾಡಿದ ಸುದೀಪ್ ಬಳಿಕ ತನಿಷಾ, ಮೈಕಲ್ ಮತ್ತು ಸ್ನೇಹಿತ್ ಬಳಿ ಕೆಲ ಕಾಲ ಮಾತನಾಡಿದರು. ತದನಂತರ ಸ್ಟ್ರಾಂಗ್ ಸ್ಪರ್ಧಿಗಳಾದ ಈ ಮೂವರ ಪೈಕಿ ಸುದೀಪ್, ತನಿಷಾ ಅವರನ್ನು ಉಳಿಸಿದರು.
ಕ್ಯಾಪ್ಟನ್ ಸ್ನೇಹಿತ್ ಮತ್ತು ಮೈಕಲ್ ನಡುವೆ ಯಾರು ಹೋಗ್ತಾರೆ ಎಂಬ ಪ್ರಶ್ನೆ ಬಂದಾಗ ಸುದೀಪ್ ಪ್ರಪ್ರಥಮ ಬಾರಿಗೆ ಇಷ್ಟು ಸೀಸನ್ಗಳಲ್ಲಿ ಬಳಸದ ಅಧಿಕಾರವನ್ನು ಉಪಯೋಗಿಸಿಕೊಂಡು ಇಬ್ಬರನ್ನು ಮನೆಯಲ್ಲಿ ಉಳಿಸುವ ಮೂಲಕ ಅವರವರ 50 ದಿನಗಳ ಪರಿಶ್ರಮವನ್ನು ಪರಿಗಣಿಸಿ, ನ್ಯಾಯ ಒದಗಿಸಿದ್ದಾರೆ. ಈ ವಾರ ಬಚಾವ್ ಆದ್ರೂ ಕೂಡ ಮುಂದಿನ ವಾರಕ್ಕೆ ಇಬ್ಬರು ಸಹ ನಾಮಿನೇಟ್ ಆಗಿದ್ದಾರೆ.