

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ನೇಮಕಾತಿ ಹಾಗೂ ಸಿಇಟಿ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಕರು ಯಾವುದೇ ಅಧಿಕಾರ ನೀಡಿರಲಿಲ್ಲ ಎಂದು ಆರೋಪಿಸಿ ಕೆಎಎಸ್ ಅಧಿಕಾರಿ ಡಾ. ಎಸ್. ರೂಪಶ್ರೀ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾಗಿರುವ ಡಾ.ಎಸ್. ರೂಪಶ್ರೀ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾವಿರುದ್ಧ ನೇರ ಆರೋಪ ಮಾಡಿದ್ದಾರೆ.
2023ರ ನ.2ರಿಂದ 2024ರ ೆ.17ರ ವರೆಗೂ ಕೆಇಎ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ಕರ್ತವ್ಯಗಳು, ಕಾಲೇಜು?ವಿದ್ಯಾರ್ಥಿಗಳಿಗೆ ಮರು ಪಾವತಿ ಮಾಡಬೇಕಾದ ಶುಲ್ಕದ ಕಡತಗಳು, ಕಚೇರಿ ನಿರ್ವಹಣೆಗೆ ಅಗತ್ಯವಿರುವ ಖರ್ಚು ವೆಚ್ಚಗಳ ಕಡತಗಳು, ಸಿಬ್ಬಂದಿ ವೇತನದ ಕಡತಗಳು, ಹೊರ ಗುತ್ತಿಗೆ ನೌಕರರು ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್‌ಗಳ ವೇತನ ಬಿಡುಗಡೆಗೆ ಕಡತಗಳು ಮತ್ತು ‘ಸಿಇಟಿ ವಿದ್ಯಾರ್ಥಿಮಿತ್ರ’ ಪಿಯುಸಿ ಶಿಕ್ಷಕರಿಗೆ ನೀಡಿದ ತರಬೇತಿ ಕಾರ್ಯದ ಕಡತಗಳ ಕುರಿತ ಕ್ರಮಕ್ಕಾಗಿ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಮಂಡಿಸಿರುತ್ತೇನೆ.
ಇವುಗಳನ್ನು ಹೊರತುಪಡಿಸಿ ಪ್ರಾಧಿಕಾರದ ಯಾವುದೇ ಕಾರ್ಯದಲ್ಲಿಯೂ ಪಾಲ್ಗೊಂಡಿಲ್ಲ. ಅದರಲ್ಲಿಯೂ ಸಿಇಟಿ, ನೀಟ್, ಇತರೆ ಕೌನ್ಸೆಲಿಂಗ್ ಪ್ರಕ್ರಿಯೆಗಳು ಹಾಗೂ ನೇಮಕಾತಿ ಪ್ರಕ್ರಿಯೆ ಭಾಗವಾದ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಯಾವುದೇ ಪ್ರಮುಖ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಕಾರ್ಯ ನಿರ್ವಾಹಕ ನಿರ್ದೇಶಕರು ಅಧಿಕೃತವಾಗಿ ಅಥವಾ ಅನೌಪಚಾರಿಕವಾಗಿಯೂ ಜವಾಬ್ದಾರಿ ನೀಡದ ಕಾರಣ ಈ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.