

ಕಳೆದ ಕೆಲ ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಸ್ಯಾಂಡಲ್ವುಡ್ ನಟಿ ರಮ್ಯಾ, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ ಮೇಲೊಂದು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಇದೀಗ ಅದೇ ರೀತಿ ರಾಧಿಕಾ ಪಂಡಿತ್ ಅವರ ಫೋಟೋಕ್ಕೂ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ಕಂಡ್ಹಿಡಿ ನೋಡೋಣ’ ಎನ್ನುತ್ತಿದ್ದಾರೆ ನಾಗೇಂದ್ರ ಅರಸ್
ಇಬ್ಬರು ಮುದ್ದು ಪುಟಾಣಿಗಳ ಜತೆ ಲಾಕ್ಡೌನ್ ಕಳೆಯುತ್ತಿರುವ ರಾಧಿಕಾ, ಇತ್ತೀಚೆಗಷ್ಟೇ ನೀನು ನೀನಾಗಿರು ಎಂಬ ಕ್ಯಾಪ್ಶನ್ ನೀಡಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರಕ್ಕೆ ರಮ್ಯಾ ಕಮೆಂಟ್ ರವಾನಿಸಿದ್ದು, 'ತುಂಬ ಮುದ್ದಾಗಿದೆ' ಎಂದಿದ್ದಾರೆ. ಬಳಿಕ ಆ ಕಮೆಂಟ್ಗೆ ರಾಧಿಕಾ ಸಹ ಪ್ರತಿಕ್ರಿಯಿಸಿದ್ದು, 'ನಿಮ್ಮಷ್ಟು ಮುದ್ದಾಗಿಲ್ಲ' ಎಂದಿದ್ದಾರೆ. ಸದ್ಯ ಈ ಇಬ್ಬರು ಸ್ಟಾರ್ಗಳ ಕಮೆಂಟ್ಗಳಿಗೆ ಅಭಿಮಾನಿ ವಲಯದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ರಕ್ಷಿತಾ ಮತ್ತು ರಮ್ಯಾ ನಡುವೆ ವೈಮನಸ್ಸು ಮನೆಮಾಡಿದೆ. ಇಬ್ಬರ ನಡುವೆ ಯಾವುದೂ ಸರಿ ಇಲ್ಲ ಎಂಬ ಸುದ್ದಿ ಮೊದಲಿಂದಲೂ ಹರಿದಾಡುತ್ತಿತ್ತು. ಆದರೆ, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತ ಈ ಹಿಂದೆ ಹರಿದಾಡಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದರು. ಇದೀಗ ರಮ್ಯಾ ಮತ್ತೆ ಯಥಾಸ್ಥಿತಿಗೆ ಮರಳುವ ಸೂಚನೆ ನೀಡಿದ್ದಾರೆ. ಸಾಕಷ್ಟು ಮಂದಿ ಮತ್ತೆ ಸಿನಿಮಾದತ್ತ ಬನ್ನಿ ಎಂದೂ ಅವರಿಗೆ ಸಂದೇಶ ರವಾನಿಸುತ್ತಿದ್ದಾರೆ.