ವಿಜಯ ದಶಮಿಯಂದೇ ಫ್ಯಾನ್ಸ್​​ಗೆ ಸರ್ಪೈಸ್​​ ಕೊಟ್ಟ ರಮ್ಯಾ..!

Ramya
Published on

ಬೆಂಗಳೂರು: ದಸರಾ ಹಬ್ಬಕ್ಕೆ ತನ್ನ ಅಭಿಮಾನಿಗಳಿಗೆ ಮೋಹಕ ತಾರೆ ರಮ್ಯಾ ಹೊಸ ಸುದ್ದಿಯೊಂದನ್ನ ನೀಡಿದ್ದಾರೆ. ಹೌದು, ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರೀಯವಾಗುತ್ತಿದ್ದಾರೆ. ಆ್ಯಪಲ್ ಬಾಕ್ಸ್​ ಹೆಸರಿನ ಪ್ರೊಡಕ್ಷನ್​ ಹೌಸ್ ಆರಂಭಿಸುವ ಮೂಲಕ ಕಂಬ್ಯಾಕ್ ಮಾಡಿದ್ದ ರಮ್ಯಾ, ಇದೇ ಬ್ಯಾನರ್​​ನಲ್ಲಿ ಸಿನಿಮಾ ಮಾಡುತ್ತಿದ್ದಾರೆ.

ತಮ್ಮದೇ ಬ್ಯಾನರ್​​ನಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ರೀ ಎಂಟ್ರಿ ಪಡೆಯುತ್ತಿದ್ದಾರೆ ರಮ್ಯಾ. ನಟನೆಯ ಜತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ರಮ್ಯಾ ಕಂಬ್ಯಾಕ್​ ಸಿನಿಮಾಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ರಾಜ್ ಬಿ. ಶೆಟ್ಟಿ ನಟನೆಯನ್ನೂ ಮಾಡುತ್ತಿದ್ದಾರೆ.

ರಮ್ಯಾ ತಮ್ಮ ಕಂಬ್ಯಾಕ್ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಮ್ಯಾ ನೀಡಿದ ಸರ್ಪೈಸ್​ಗೆ ಫ್ಯಾನ್​​ ಖುಷಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net