ಚೀನಾ ಗಲಾಟೆ: ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ

ram mandira
Published on

ಅಯೋಧ್ಯೆ: ಬಹು ವರ್ಷಗಳ ನಂತರ ಅಯೋಧ್ಯೆಯಲ್ಲಿ ಆರಂಭವಾಗಿದ್ದ ರಾಮಮಂದಿರ ನಿರ್ಮಾಣ ಕಾರ್ಯವನ್ನು ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ನಿರ್ಮಾಣ ಕಾರ್ಯ ಸ್ಥಗಿತದ ಕುರಿತಂತೆ ರಾಮಮಂದಿರ ಟ್ರಸ್ಟ್ ಮಾಹಿತಿ ನೀಡಿದೆ. ''ದೇಶದ ರಕ್ಷಣೆ ಬಹಳ ಮುಖ್ಯ. ಪರಿಸ್ಥಿತಿ ಬಹಳ ಗಂಭೀರವಾಗಿದೆ. ರಾಮ ಮಂದಿರ ನಿರ್ಮಾಣ ಯೋಜನೆ ಈಗ ಆರಂಭಿಸುವುದು ಸೂಕ್ತವಲ್ಲ, ಸದ್ಯಕ್ಕೆ ರಾಮಮಂದಿರ ನಿರ್ಮಾಣ ಯೋಜನೆ ಇಲ್ಲ'' ಎಂದು ಟ್ರಸ್ಟ್​ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.

'ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭದ ಬಗ್ಗೆ ದೇಶದ ಪರಿಸ್ಥಿತಿ ಅನುಗುಣವಾಗಿ ತೆಗೆದುಕೊಳ್ಳಲಾಗುವುದು ಮತ್ತು ಅಧಿಕೃತವಾಗಿ ಘೋಷಣೆ ಮಾಡಲಾಗುವುದು' ಎಂದು ಅವರು ತಿಳಿಸಿದ್ದಾರೆ.

ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಘರ್ಷಣೆ ಸಂಭವಿಸಿದ್ದು, ಈ ಘಟನೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಮಮಂದಿರ ಕಾರ್ಯ ಸೂಕ್ತವಲ್ಲ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮಿಶ್ರಾ ಹೇಳಿದ್ದಾರೆ.

ಜುಲೈ ಮೊದಲ ವಾರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೂಮಿ ಪೂಜೆ ನಡೆಸಲಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ಎಲ್ಲ ತಯಾರಿ ಸಹ ನಡೆಯುತ್ತಿತ್ತು. ಇದೀಗ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿರುವ ಕಾರಣ, ಸದ್ಯ ಸ್ಥಗಿತಗೊಳಿಸಲಾಗಿದ್ದು, ವಾತಾವರಣ ತಿಳಿಗೊಂಡ ನಂತರ ಕಾರ್ಯ ಮುಂದುವರೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net