

-AI ಸೃಷ್ಟಿಸಿದ ವೀಡಿಯೋ ನೋಡಿ
ಬೆಂಗಳೂರು: ರಾಮಲಲ್ಲಾನ ಮೂರ್ತಿಯೂ ಮುಗುಳ್ನಗುತ್ತಾ ತನ್ನ ತಲೆಯನ್ನು ತಲೆ ತಿರುಗಿಸುತ್ತಾ ನೋಡುತ್ತಿರುವಂತೆ ಭಾಸವಾಗುವ ವೀಡಿಯೋವೊಂದನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದ್ದು, ಈ ವೀಡಿಯೋ ಸಖತ್ ವೈರಲ್ ಆಗಿದೆ.
ಅಯೋಧ್ಯೆಯಲ್ಲಿರುವ ತಮ್ಮ ಅರಮನೆಯಲ್ಲಿ ನೆಲೆಸಿದ್ದಾರೆ. ರಾಮಮಂದಿರದಲ್ಲಿ ಸೋಮವಾರ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭದೊಂದಿಗೆ ರಾಮಭಕ್ತರ 500 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿತು. 500 ವರ್ಷಗಳ ಸುದೀರ್ಘ ಹೋರಾಟದ ನಂತರ ನನಸಾಗುವ ಚೇತನ, ಸಮರ್ಪಣೆ, ತ್ಯಾಗ ಮತ್ತು ತಪಸ್ಸಿನ ಫಲಿತಾಂಶವಾಗಿದೆ.
ಎಐ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಕಲಾವಿದರೊಬ್ಬರು ಸೃಷ್ಟಿಸಿದ ಈ ಅದ್ಭುತ ವೀಡಿಯೋ ವೈರಲ್ ಆಗಿದ್ದು, ನೋಡುಗರ ಮನವನ್ನು ರೋಮಾಂಚನಗೊಳಿಸುತ್ತದೆ. ನಿಜವಾಗಿಯೂ ಬಾಲರಾಮನೇ ತಲೆ ಅಲ್ಲಾಡಿಸುತ್ತಾ ಅತ್ತಿತ್ತ ನೋಡುವಂತಿದೆ ಈ ವೀಡಿಯೋ. ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಚೌಧರಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋ ನೋಡಿದ ಬಹುತೇಕರು ಇದಕ್ಕೆ ಅದ್ಭುತ, ಸುಂದರ ಅತೀ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ.
ಮಗುವಿನ ಮಂದಸ್ಮಿತದಿಂದ ಕಂಗೊಳಿಸುವ ರಾಮಮೂರ್ತಿಯನ್ನು ನೋಡಿ ಜನ ಬಾಲರಾಮನೇ ಧರೆಗಿಳಿದು ಬಂದಷ್ಟು ಭಾವುಕರಾಗಿದ್ದಾರೆ. ದೇಶದ ಬಹುತೇಕ ನಾಗರಿಕರು ತಮ್ಮ ಸಾಮಾಜಿಕ ಜಾತಾಣಗಳಾದ ಫೇಸ್‌ಬುಕ್ ಇನ್ಸ್ಟಾಗ್ರಾಮ್ ಯೂಟ್ಯೂಬ್‌ಗಳಲ್ಲಿ ಮುದ್ದು ಕಂದನಂತೆ ಕಾಣುವ ರಾಮನ ಫೋಟೋಗಳನ್ನು ಶೇರ್ ಮಾಡಿಕೊಂಡು ಭಕ್ತಿ ಮೆರೆದರು.