ರಮೇಶ್ ಜಾರಕಿಹೊಳಿಗೆ ದೆಹಲಿ ಬುಲಾವ್?

Published on

ಬೆಂಗಳೂರು:
ಬಿಜೆಪಿ ಭಿನ್ನಮತೀಯ ನಾಯಕ ರಮೇಶ್ ಜಾರಕಿಹೊಳಿ ಅವರಿಗೆ ದೆಹಲಿ ಹೈಕಮಾಂಡ್ ಬುಲಾವ್ ನೀಡಿದೆ ಎಂದು ತಿಳಿದುಬಂದಿದೆ.
ಪ್ರತ್ಯೇಕ ಸಭೆ ನಡೆಸಿ, ಪ್ರತ್ಯೇಕ ಪಾದಯಾತ್ರೆ ಬಗ್ಗೆಯೂ ಚರ್ಚೆಗಳು ನಡೆದ ಬೆನ್ನಲ್ಲಿಯೇ ರಮೇಶ್ ಅವರಿಗೆ ದೆಹಲಿ ನಾಯಕರು ಪೋನಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯಿಂದ ಮುಂಬೈಗೆ ತೆರಳಲಿರುವ ರಮೇಶ್ ಅವರು ಅಲ್ಲಿಂದ ದೆಹಲಿಗೆ ಹೋಗುತ್ತಾರೆಯೇ? ಅಥವಾ ಬೆಂಗಳೂರಿಗೆ ಮರುಳುತ್ತಾರೆಯೇ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net