ಎಫ್​​ಕೆಸಿಸಿಐ ನೂತನ ನೂತನ ಅಧ್ಯಕ್ಷರಾಗಿ ರಮೇಶಚಂದ್ರ ಲಹೋಟಿ ಆಯ್ಕೆ

fkcci
Published on

ಬೆಂಗಳೂರು: ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆಯ (ಎ್ಕೆಸಿಸಿಐ) 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳು ಚುನಾಯಿತರಾಗಿದ್ದು, ಅಧ್ಯಕ್ಷರಾಗಿ ರಮೇಶಚಂದ್ರ ಲಹೋಟಿ ಆಯ್ಕೆ ಆಗಿದ್ದಾರೆ.

ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬುಧವಾರ 106ನೇ ವಾರ್ಷಿಕ ಮಹಾಸಭೆಯ ಬಳಿಕ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ರಮೇಶಚಂದ್ರ ಲಹೋಟಿ, ಹಿರಿಯ ಉಪಾಧ್ಯಕ್ಷರಾಗಿ ಎಂ.ಜಿ. ಬಾಲಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಉಮಾರೆಡ್ಡಿ ಆಯ್ಕೆಯಾಗಿದ್ದಾರೆ. ಈ ಮೂವರು ಸೇರಿ ಒಟ್ಟು 48 ಮಂದಿ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇದೇ ವೇಳೆ ಸಣ್ಣ ಕೈಗಾರಿಕೆ ವಿಭಾಗಕ್ಕೆ ಕೆ.ವಿ.ರಾಜೇಂದ್ರ ಕುಮಾರ್, ರಾಮಕೃಷ್ಣ ಬುರ್ಜಿ, ರಾಮಕೃಷ್ಣ ಮತ್ತು ಶಶಿಧರ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net