ಡಿಸಿಎಂ ಹುದ್ದೆಗೆ ಜಾರಕಿಹೊಳಿ ಲಾಬಿ

Ramesh Jarakiholi vvani
Ramesh Jarakiholi
Published on

ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನ ಮುಂದುವರಿಸಿದ್ದಾರೆ. ಆಪರೇಷನ್ ಕಮಲ ಸಂದರ್ಭದಲ್ಲಿಯೇ ಬಿಜೆಪಿ ವರಿಷ್ಠರು ರಮೇಶ್ ಜಾರಕಿಹೊಳಿಗೆ ಉಪ ಮುಖ್ಯಮಂತ್ರಿ ಹುದ್ದೆ ಭರವಸೆ ನೀಡಿದ್ದರು. ಇದೀಗ ಆ ಭರವಸೆ ಈಡೇರಿಸುವಂತೆ ಹೈಕಮಾಂಡ್ ಮೇಲೆ ರಮೇಶ್ ಒತ್ತಡ ತರಲಾರಂಭಿಸಿದ್ದಾರೆ. ಈಗಾಗಲೆ ನಾಲ್ಕೈದು ಬಾರಿ ವರಿಷ್ಠರನ್ನು ಭೇಟಿ ಮಾಡಿದ್ದು, ಮುಂದಿನ ವಾರ ಮತ್ತೊಮ್ಮೆ ದೆಹಲಿಗೆ ತೆರಳುತ್ತಿದ್ದಾರೆ. ಸಚಿವರಾದ ನಂತರ ತಮಗೆ ಬೇಕಾದ ಖಾತೆ ಪಡೆಯುವಲ್ಲಿ ಜಾರಕಿಹೊಳಿ ಯಶಸ್ವಿಯಾಗಿದ್ದರು. ಇದೀಗ ಅವರ ಗುರಿ ಡಿಸಿಎಂ ಹುದ್ದೆಯಾಗಿದ್ದು, ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಹುದ್ದೆ ಪಡೆಯಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದು ಆಪ್ತ ಮೂಲಗಳು ಹೇಳಿವೆ.

ಬಲ ಹೆಚ್ಚಿಸಿಕೊಳ್ಳುವ ಹಂಬಲ: ರಮೇಶ್ ಬಿಜೆಪಿಯಲ್ಲಿ ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್​ನಿಂದ ಮತ್ತಷ್ಟು ಶಾಸಕರನ್ನು ಸೆಳೆದುಕೊಂಡು ಬರುವುದಾಗಿಯೂ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಮತ್ತಷ್ಟು ಶಾಸಕರನ್ನು ಕರೆದುಕೊಂಡು ಬಂದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಸದ್ಯಕ್ಕೆ ಆ ಪ್ರಯತ್ನ ಬೇಡವೆಂದು ವರಿಷ್ಠರು ಬ್ರೇಕ್ ಹಾಕಿದ್ದಾರೆನ್ನಲಾಗಿದೆ. ಆಪ್ತ ಶಾಸಕರ ಸಂಖ್ಯೆ ಹೆಚ್ಚಾಗಿದ್ದರೆ ಪಕ್ಷದ ವರಿಷ್ಠರು ತನ್ನ ಮಾತು ಕೇಳುತ್ತಾರೆ ಎಂಬುದು ರಮೇಶ್ ಉದ್ದೇಶವಾಗಿದೆ. ಈ ರೀತಿ ಅವಕಾಶ ಕೊಟ್ಟರೆ ಹೈಕಮಾಂಡ್ ಹಿಡಿತ ತಪು್ಪತ್ತದೆ ಎಂಬ ಕಾರಣಕ್ಕೆ ವರಿಷ್ಠರು ಸಮ್ಮತಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net