

ಬೆಂಗಳೂರು: ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ತಯಾರಿಸಿದ್ದೇ ಕಾಂಗ್ರೆಸ್ನವರು! ಇಂಥ ಮನೆಹಾಳು, ತೇಜೋವಧೆ ಕೆಲಸ ಮಾಡೋದು ಅವ್ರೇ. ನಾನು 20 ವರ್ಷ ಕಾಂಗ್ರೆಸ್ನಲ್ಲೇ ಇದ್ದೆ. ಅವ್ರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, 100% ಸಿಡಿ ಮಾಡಿದ್ದೇ ಕಾಂಗ್ರೆಸ್ ನವ್ರು, ಇನ್ಯಾರು ಮಾಡಿರ್ತಾರೆ? ಸಿಡಿ ಪ್ರಕರಣ ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ. ಸಿಬಿಐ ತನಿಖೆಯಿಂದ ಎಲ್ಲವೂ ಆಚೆ ಬರುತ್ತೆ. ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ. ತಾಕತ್ತಿದ್ರೆ ನನ್ ವಿರುದ್ಧ ಇಲ್ಲವೇ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ. ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿರಿ ಗೋಕಾಕ್ ಸಾಹುಕಾರನಿಗಾಗಿ ವಿಭಿನ್ನ ಅಭಿಯಾನ ಶುರು
ಕಾಂಗ್ರೆಸ್ನವರು ಪ್ರಶ್ನೆ ಕೇಳಿದ್ದಾರೆ. ಸದನದಲ್ಲಿ ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಲಿಖಿತವಾಗಿಯೂ ಉತ್ತರ ಕೊಡ್ತೇವೆ. ನಮ್ಮ ನೈತಿಕತೆ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡ್ತಿದಾರೆ. ಮೈತ್ರಿ ಸರ್ಕಾರ ಪತನ ಆಗಿದ್ದೇ ಈ ನೈತಿಕತೆಯಿಂದ. ನೈತಿಕತೆ ಬಗ್ಗೆ ಈಗ ಕೇಳ್ತಿದಾರೆ. ಸದನದಲ್ಲಿ ಇದರ ಬಗ್ಗೆ ಸೂಕ್ತ ಉತ್ತರ ಕೊಡ್ತೇವೆ ಎಂದರು.