ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ...

death case
Published on

ಕೊಳ್ಳೇಗಾಲ: ಸೊಸೆಯನ್ನು ಚಾಕುವಿನಿಂದ ಇರಿದು ಕೊಂದ ಮಾವ, ಬಳಿಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಸಂಭವಿಸಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಆದರ್ಶನ ನಗರದ ನಿವಾಸಿ ಸುಮಿತ್ರ(35) ಕೊಲೆಯಾದವರು. ಈಕೆಯನ್ನು ಮಾವ ಚಿಕ್ಕುಚ್ಚಯ್ಯ(52) ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾ‌ನೆ. ಇದನ್ನೂ ಓದಿರಿ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಕಾಂಗ್ರೆಸ್​ ಶಾಸಕಿ ಕೈವಾಡ! ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು?

ಸುಮಿತ್ರಾಳ ಗಂಡ ಸುರೇಂದ್ರ ಅವರು ತಾಲೂಕು ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಮಧ್ಯಾಹ್ನ ಊಟಕ್ಕೆಂದು ಸುರೇಂದ್ರ ಮನೆಗೆ ಬಂದಾಗ ಕೊಲೆ-ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸುರೇಂದ್ರ ಬೆಳಗ್ಗೆ ಕೆಲಸಕ್ಕೆಂದು ಹೊರ ಹೋದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇನ್ನು ಆತ್ಮಹತ್ಯೆ ಮಾಡಿಕೊಂಡ ಚಿಕ್ಕುಚ್ಚಯ್ಯ ಸಾವಿಗೂ ಡೆತ್​ನೋಟು ಬರೆದಿದ್ದಾನೆ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುನ್ನ ಮೂರ್ನಾಲ್ಕು ಪುಟಗಳುಲ್ಲ ಡೆತ್​ನೋಟ್​ನಲ್ಲಿ ಚಿಕ್ಕುಚ್ಚಯ್ಯ, ಮಗ-ಸೊಸೆ ಮದುವೆ ಮಾಡಿದ್ದು ಹೇಗೆ ಎಂಬುದರ ಮಾಹಿತಿ ಜತೆಗೆ ಸಾವಿನ ರಹಸ್ಯವನ್ನೂ ದಾಖಲಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net