ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಿಎಂ ಬಿಎಸ್​ವೈಗೆ ತಲೆನೋವಾದ ಶಾಸಕ ರಮೇಶ್ ಜಾರಕಿಹೊಳಿ ನಡೆ

Ramesh Jarakiholi
Published on

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಶಾಸಕ ರಮೇಶ್ ಜಾರಕಿಹೊಳಿ ನಡೆಯಿಂದ ಸಿಎಂ ಬಿಎಸ್​ವೈಗೆ ಇರುಸುಮುರಿಸಾಗಿದೆ. ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂದು ಸಿಎಂಗೆ ರಮೇಶ್​ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಮಹೇಶ್ ಕುಮಟಹಳ್ಳಿ ಅಥವಾ ಶ್ರೀಮಂತ ಪಾಟಿಲ ಒಬ್ಬರನ್ನು ಕೈಬಿಡುವ ಬಗ್ಗೆ ಸಿಎಂ ನಿರ್ಧಾರ ಮಾಡಿದ್ದಾರೆ. ಯಾರನ್ನು ಕೈಬಿಡಬೇಕು ನೀವೆ ನಿರ್ಧರಿಸಿ ಎಂದು ರಮೇಶ್ ಜಾರಕಿಹೊಳಿಗೆ ಸಿಎಂ ಸಂದೇಶ ರವಾನಿದ್ದಾರೆ ಎನ್ನಲಾಗಿದೆ. ಆದರೆ, ಯಾರನ್ನು ಕೈಬಿಡಬಾರದು ಎಂದು ರಮೇಶ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇದೀಗ ರಮೇಶ್ ಜಾರಕಿಹೊಳಿ ಪಟ್ಟಿನಿಂದ ಸಿಎಂ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಾಳೆ ಇಡೀ ದಿನ ಸಿಎಂ ಪೂರ್ವಭಾವಿ ಬಜೆಟ್​ನಲ್ಲಿ ಬಿಜಿಯಾಗಿರಲಿದ್ದಾರೆ. ನಾಳೆಯ ಸಿಎಂ ಟಿಪಿಯಲ್ಲಿ ರಿಸರ್ವ್ ಸಮಯ ಇರದ ಕಾರಣ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಯಾವಾಗ ಸಚಿವ ಸಂಪುಟ ವಿಸ್ತರಣೆ ಎಂದು ಕುತೂಹಲದಿಂದ ಶಾಸಕರು ಕಾಯುತ್ತಿದ್ದು, ಮುಂದೆ ರಾಜ್ಯ ರಾಜಕೀಯದಲ್ಲಿ ನಡೆಯುವ ವಿದ್ಯಾಮನಗಳ ಮೇಲೆ ತೀವ್ರ ಕುತೂಹಲ ಕೆರಳಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net