VIDEO| 100 - ರಂಗು ರಂಗು ಪಾರ್ಟಿಗೆ.. ಚಂದದಂತ ಮೂತಿಗೆ..

929168
Published on

ಬೆಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಬಹಳ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು (ಸೆ. 10) ಆಚರಿಸಿಕೊಂಡಿದ್ದಾರೆ ರಮೇಶ್ ಅರವಿಂದ್. ಈ ಹುಟ್ಟುಹಬ್ಬಕ್ಕೆ, ಅವರಿಗೆ ಸಿಕ್ಕ ಪ್ರಮುಖವಾದ ಗಿಫ್ಟ್ ಎಂದರೆ, ಅವರೇ ಹಾಡಿರುವ ಒಂದು ಹಾಡು. ‘100’ (ಹಂಡ್ರೆಡ್) ಚಿತ್ರಕ್ಕೆ ರಮೇಶ್ ಅರವಿಂದ್ ಮೊದಲ ಬಾರಿಗೆ ಪೂರ್ಣಪ್ರಮಾಣವಾಗಿ ಒಂದು ಹಾಡು ಹಾಡಿದ್ದು, ಈ ಹಾಡನ್ನು ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಗಿಫ್ಟ್ ಕೊಟ್ಟಿರುವುದು ವಿಶೇಷ.

ನಾಯಕನಿಗೆ ಆತನ ಹೆಂಡತಿ ಮತ್ತು ತಂಗಿ ಕಾಲೆಳೆಯುವ ಈ ಹಾಡಿಗೆ ರಮೇಶ್ ಅರವಿಂದ್ ಜತೆಗೆ ಅನನ್ಯ ಭಟ್ ಮತ್ತು ನೀತು ಸುಬ್ರಹ್ಮಣ್ಯಂ ಸಹ ಧ್ವನಿಯಾಗಿದ್ದಾರೆ. ‘ರಂಗುರಂಗು ಪಾರ್ಟಿಗೆ ...’ ಎಂಬ ಈ ಪಾರ್ಟಿ ಹಾಡಿನಲ್ಲಿ ರಮೇಶ್ ಅರವಿಂದ್ ಜತೆಗೆ ರಚಿತಾ ರಾಮ್ ಪೂರ್ಣ ಮುಂತಾದವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಹಾಡಿಗೆ ಯೂಟ್ಯೂಬ್​ನಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಹಲವರು ರಮೇಶ್ ಅವರ ಹುಟ್ಟುಹಬ್ಬಕ್ಕೂ ಶುಭ ಕೋರಿದ್ದಾರೆ.

ಅಂದಹಾಗೆ, ಬರೀ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟ-ನಟಿಯರು ರಮೇಶ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಸುದೀಪ್, ಶ್ರೀಮುರಳಿ, ಧನಂಜಯ, ರಚಿತಾ ರಾಮ್ ಕಾಜಲ್ ಅಗರವಾಲ್, ನಿರೂಪ್ ಭಂಡಾರಿ ಸೇರಿದಂತೆ ಹಲವು ನಟ-ನಟಿಯರು ರಮೇಶ್ ಅವರ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net