

ಡೆಹ್ರಾಡೂನ್: ಇಂದು ಡೆಹ್ರಾಡೂನ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್, ರಾಷ್ಟ್ರೀಯ ಹಿತಾಸಕ್ತಿಗಾಗಿ ಮತ ಚಲಾಯಿಸಿ ಮತ್ತು ದೇಶವನ್ನು ಆರ್ಥಿಕ ಹಾಗೂ ಕಾರ್ಯತಂತ್ರದ ಸೂಪರ್ ಪವರ್ ಮಾಡಲು ಸಮರ್ಥವಾಗಿರುವ ಸರ್ಕಾರವನ್ನು ಮಾತ್ರ ಆಯ್ಕೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.
"ನೀವು ರಾಷ್ಟ್ರೀಯ ಹಿತಾಸಕ್ತಿಯಿಂದ ನಿಮ್ಮ ಮತವನ್ನು ಚಲಾಯಿಸಬೇಕು. ಭಾರತವನ್ನು ಆರ್ಥಿಕ ಮತ್ತು ಕಾರ್ಯತಂತ್ರದ ಸೂಪರ್ ಪವರ್ ಮಾಡಲು ಸಮರ್ಥವಾಗಿರುವ ಸರ್ಕಾರವನ್ನು ಆಯ್ಕೆ ಮಾಡಿ. ಕೇವಲ ಅಭಿವೃದ್ಧಿಗಾಗಿ ಕೆಲಸ ಮಾಡುವ ಹಾಗೂ ದೇಶದ ಸಾಂಸ್ಕೃತಿಕ ಪರಂಪರೆಯ ಕಾಳಜಿ ವಹಿಸುವ ಸರ್ಕಾರಕ್ಕೆ ಮತ ನೀಡಿ" ಎಂದು ಹರಿದ್ವಾರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“ಆಧ್ಯಾತ್ಮಿಕ ಜೀವನವು ನಮ್ಮ ಸಂಸ್ಕೃತಿ ಮತ್ತು ಸನಾತನದ ಸಂವಿಧಾನದಿಂದ ನಿಯಂತ್ರಿಸಲ್ಪಡುತ್ತದೆ. ಆದರೆ ದೇಶವು ಭಾರತದ ಸಂವಿಧಾನದಿಂದ ನಡೆಸಲ್ಪಡುತ್ತದೆ. ಅದು ನಮಗೆ ಮತದಾನ ಮಾಡುವ ದೊಡ್ಡ ಹಕ್ಕನ್ನು ನೀಡುತ್ತದೆ. ಸನಾತನದಲ್ಲಿ ಬೇರೂರಿರುವ ಜನರಿಗೆ ನಾವೆಲ್ಲರೂ ಮತ ಹಾಕಬೇಕು" ಎಂದರು,(ಏಜೆನ್ಸೀಸ್).