ಅಟಲ್‌ಜೀಗೆ ರಂಭಾಪುರಿ ಶ್ರೀ ನೆತ್ತರ ಪತ್ರ!

rambhapuri
ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ರಕ್ತದಿಂದ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬರೆದಿದ್ದ ಪತ್ರ.
Published on

ಆಲ್ದೂರು: ಕಾರ್ಗಿಲ್ ವಿಜಯ ದಿನ ಜು.26 ಭಾರತೀಯರಿಗೆ ಮರೆಯಲಾಗದು. ಕಾರ್ಗಿಲ್ ಯುದ್ಧದ ಸಂದರ್ಭ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅವರ ರಕ್ತದಿಂದ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದು ದೇಶದ ಸೈನಿಕರ ಶೌರ್ಯ ಹಾಗೂ ಪ್ರಧಾನಿ ಅವರ ದಿಟ್ಟ ನಿರ್ಧಾರ ಶ್ಲಾಘಿಸಿ ನಾವು ನಿಮ್ಮೊಂದಿಗಿದ್ದೇವೆ ಎಂದು ಬರೆದ ಪತ್ರದ ಫೋಟೋ ಪ್ರತಿ ಲಭ್ಯವಾಗಿದೆ.

ದೇಶದ ಔದಾರ್ಯ ಹಾಗೂ ಧರ್ಮನಿರಪೇಕ್ಷತಾ ಭಾವನೆಯನ್ನು ಪಾಕಿಸ್ತಾನ ಅರಿತುಕೊಳ್ಳಲಿ. ಸದಾ ಶಾಂತಿ ಬಯಸುವ ಭಾರತ ಸಮಯ ಬಂದಾಗ ಹೋರಾಟಕ್ಕೂ ಹಿಂಜರಿಯದು. ಭಾರತದ ಮುತ್ಸದ್ದಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆ ರಾಷ್ಟ್ರದ ಜನತೆ ನಿಂತಿದೆ. ಪಾಕಿಸ್ತಾನ ತಪ್ಪು ಒಪ್ಪಿಕೊಂಡು ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವಂತಾಗಲಿ. ಭಾರತೀಯ ವೀರಯೋಧರ ದಿಟ್ಟತನ ಮೆಚ್ಚುವಂತದ್ದು. ತಾಯಿನಾಡಿನ ನೆಲ ಸಂರಕ್ಷಣೆಗಾಗಿ ಅನೇಕ ಯೋಧರು ವೀರ ಮರಣ ಹೊಂದಿದ್ದಾರೆ. ಈಗ ಹೋರಾಟ ನಡೆಸುತ್ತಿರುವ ಭಾರತೀಯ ಎಲ್ಲ ಸೈನಿಕರಿಗೆ ಧೈರ್ಯ, ಸ್ಥೈರ್ಯ ತುಂಬಿ ಪ್ರೇರೇಪಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶವನ್ನು ಪತ್ರದಲ್ಲಿ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net