'ರಾಮಾಯಣ' ಸೆಟ್​ನಿಂದ ರಣಬೀರ್​ ಮತ್ತು ಸಾಯಿ ಪಲ್ಲವಿ ಫೋಟೋ ಆನ್​ಲೈನ್​ನಲ್ಲಿ​ ಸೋರಿಕೆ! ಫ್ಯಾನ್ಸ್​ ಕಿಡಿ

WhatsApp Image 2024-04-27 at 3.57.00 PM
Published on

ಮುಂಬೈ: 'ದಂಗಲ್' ಚಿತ್ರದ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಬಿಗ್ ಬಜೆಟ್ 'ರಾಮಾಯಣ' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಚಿತ್ರೋದ್ಯಮದ ಸ್ಟಾರ್​ ನಟರು ಈ ಪ್ರಾಜೆಕ್ಟ್​ನ ಭಾಗವಾಗಿರುವುದು ಸಿನಿಪ್ರೇಕ್ಷಕರ ಹುಬ್ಬೇರುವಂತೆ ಮಾಡಿದೆ. ಸಿನಿಮಾ ಕುರಿತಂತೆ ಹೊಸ ಅಪ್ಡೇಟ್​ಗಳಿಗಾಗಿ ಕಾತರ ವ್ಯಕ್ತಪಡಿಸಿದ್ದ ಪ್ರೇಕ್ಷಕರಿಗೆ ಇದೀಗ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೋಡಿಯ ಫಸ್ಟ್​ಲುಕ್ ಪೋಸ್ಟರ್​​ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿರುವ ಸುದ್ದಿ ಭಾರೀ ಬೇಸರ ತಂದಿದೆ.

ಬಾಲಿವುಡ್​ ನಟ ರಣಬೀರ್​ ಕಪೂರ್​, ಟಾಲಿವುಡ್​ನ ಸಾಯಿ ಪಲ್ಲವಿ, ರಾಮ ಮತ್ತು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕನ್ನಡ ಚಿತ್ರರಂಗದ 'ಕೆಜಿಎಫ್​' ಖ್ಯಾತಿಯ ರಾಕಿಂಗ್ ಸ್ಟಾರ್​ ಯಶ್​ ರಾವಣನ ಪಾತ್ರದಲ್ಲಿ ಮಿಂಚಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದರೆ, ಚಿತ್ರತಂಡಕ್ಕೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದ್ದು, ಸೆಟ್​ನಲ್ಲಿ ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ಫಸ್ಟ್​ ಲುಕ್​ ಫೋಟೋಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ.

ಈ ರೀತಿಯ ಸೋರಿಕೆ ಸಮಸ್ಯೆ ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಸಿನಿಮಾಗಳಿಗೆ ಇಂತಹ ತೊಂದರೆಯಾಗಿದೆ. ಆದರೆ, ತಮ್ಮ ನೆಚ್ಚಿನ ಸ್ಟಾರ್​ಗಳ ಬಹುನಿರೀಕ್ಷಿತ ಚಿತ್ರಕ್ಕೆ ಇಂತಹ ಎಡವಟ್ಟು ಮಾಡಿದರಲ್ಲ ಎಂದು ಅಭಿಮಾನಿಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮುಂದೆ ಸೋರಿಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಫ್ಯಾನ್ಸ್​ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net