ಹೊರನಾಡಿನಲ್ಲಿ ರಾಮನಾಮ ಸಂಕೀರ್ತನೆ

kalasheswara
ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮ ನಡೆಯಿತು.
Published on

ಕಳಸ: ಬಾಲರಾಮನ ಪ್ರಾಣ ಪ್ರತಿಷ್ಠಾಪಣೆಯ ನಿಮಿತ್ತ ತಾಲೂಕಿನ ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.
ಕಲಶೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ರಾಮತಾರಕ ಹೋಮ, ಅಯೋಧ್ಯೆ ಕಾರ್ಯಕ್ರಮದ ನೇರಪ್ರಸಾರ, ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಭಟ್ ಅವರಿಗೆ ಸನ್ಮಾನ ಹಾಗೂ ಅನ್ನದಾನ ನಡೆಯಿತು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶ್ರೀರಾಮತಾರಕ ಹೋಮ, ಹರಿಕಥೆ, ರಾಮದೇವರ ಭಜನೆ, ರಾಮನಾಮ ಸಂಕೀರ್ತನೆ ಸಮರ್ಪಣೆ, ಸಂಜೆ ದೀಪೋತ್ಸವ ನಡೆಯಿತು.
ಹಳುವಳ್ಳಿ ಶ್ರೀರಾಮ ದೇವಸ್ಥಾನ, ಕಳಸ ವೆಂಕಟರಮಣ ದೇವಸ್ಥಾನ, ಹಿರೆಬೈಲು ಸಂಸ್ಕೃತಿ ಮಂದಿರ, ಶ್ರೀರಾಮ ಸೇವಾ ಯುವಕ ಸಂಘ ಕೆಳಭಾಗ, ಎಡಮುರೇಶ್ವರ ದೇವಸ್ಥಾನ ಬಾಲ್ಗಲ್, ಮರಸಣಿಗೆ ಗಣಪತಿ ದೇವಸ್ಥಾನ ಮತ್ತು ಇತರೆಡೆ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಹಿಂದುಗಳು ಮನೆಗಳಲ್ಲಿ ದೀಪಗಳನ್ನು ಹಚ್ಚಿ ರಾಮನ ಭಜನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net