

ರಾಮನಗರ : ಅಗತ್ಯ ವಸ್ತುಗಳ ಬೆಲೆ ಏರಿಕೆುಂದಾಗಿ ದೇಶದ ಸಾಮಾನ್ಯ ಜನ ತತ್ತರಿಸಿ ಹೋಗಿದ್ದಾರೆ ಎಂದು ಎನ್‌ಎಸ್‌ಯುಐನ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದರು.
ನಗರದ ಐಜೂರು ವೃತ್ತದಲ್ಲಿ ಎನ್‌ಎಸ್‌ಯುಐ ಘಟಕದ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಗ್ಯಾಸ್ ಸಿಲಿಂಡರ್ ಪ್ರತಿಕೃತಿಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯ ಪದಾರ್ಥಗಳ ಬೆಲೆ ಗಗನ ಮುಟ್ಟಿದೆ ಗ್ಯಾಸ್ ಬೆಲೆಯಂತೂ ದಿನೇ ದಿನೇ ಗಗನ ಮುಟ್ಟಿದೆ ಬದುಕು ದುಸ್ತರವಾಗಿದೆ. ಜನ ಸಾಮಾನ್ಯರಿಗೆ ಆರ್ಥಿಕ ಹೊರೆ ಹೆಚ್ಚಿಸುವ ಮೂಲಕ ಬಿಜೆಪಿ ಬಡ ಜನರ ಬದುಕಿಗೆ ಬರೆ ಎಳೆಯುತ್ತಿದೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಜನ ಸಾಮಾನ್ಯರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ಧಾರೆ.
ಅಚ್ಛೇದಿನ್ ತರುತ್ತೇನೆ ಎಂದು ಬಿಜೆಪಿಯವರು ಹೇಳಿದರು. ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದರೂ ಆದರೆ ಗ್ಯಾಸ್ ಸಿಲೆಂಡರ್ ಸೇರಿದಂತೆ ಅಗತ್ಯ ಪದಾರ್ಥಗಳ ಬೆಲೆ ಏರಿದ್ದು ಬಿಟ್ಟರೆ ಅಚ್ಚೆ ದಿನ್ ಬರಲೇ ಇಲ್ಲ ಎಂದರು
ಎನ್‌ಎಸ್‌ಯುಐನ ರಾಮನಗರ ಜಿಲ್ಲಾಧ್ಯಕ್ಷ ಅಮರ್ ಮಾತನಾಡಿ ಬಿಜೆಪಿ ಸರಕಾರ ದಿನ ನಿತ್ಯ ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ದಿನಗೂಲಿ ನೌಕರರು ಸಂಪಾದನೆ ಮಾಡುವ ಹಣವನ್ನು ಪದಾರ್ಥಗಳ ಖರೀದಿಗೆ ಹಾಕಬೇಕಿದೆ.
400ರೂ. ಇದ್ದ ಸಿಲಿಂಡರ್ ಮೌಲ್ಯ ಇಂದು 1200ರೂ ಆಗಿದೆ. ದಿನಗೂಲಿ ನೌಕರರು ಮಕ್ಕಳ ವಿದ್ಯಾಬ್ಯಾಸ ನೋಡಿಕೊಳ್ಳಬೇಕು. ಅಥವಾ ಅಗತ್ಯ ಪದಾರ್ಥಗಳು ಖರೀದಿ ಮಾಡಬೇಕೋ ಎನ್ನುವುದು ಕಷ್ಟವಾಗಿದೆ. ಇನ್ನು ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲೆಂಡರ್ ಮೌಲ್ಯ ಸೇರಿದಂತೆ ಹೆಚ್ಚುತ್ತಿರುವ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಡಾ. ದೀಪಾ, ಎನ್‌ಎಸ್‌ಯುಐನ ರಾಜ್ಯ ಮಾಜಿ ಉಪಾಧ್ಯಕ್ಷ ಗುರುಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್, ಬಿಡದಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಶೋಭಾ , ಪದಾಧಿಕಾರಿಗಳಾದ ಕಿಶೋರ್, ನಂಜೇಗೌಡ,ಎ.ಟಿ. ಕಾರ್ತೀಕ್, ಕನಕಪುರ ತಾಲೂಕು ಅಧ್ಯಕ್ಷ ಸುನಿಲ್, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಮಂಜೇಶ್, ರವಿಕಿರಣ್, ಚರಣ್, ನವೀನ್ ಸೇರಿದಂತೆ ಹಲವರು ಹಾಜರಿದ್ದರು.