ರಾಮನಗರ: ಕಾರಾಗೃಹದಲ್ಲಿ ಕೈದಿಗಳ ಆರೋಗ್ಯ ತಪಾಸಣೆ

ramamangar jaill
Published on

ರಾಮನಗರ: ನಗರದ ಜಿಲ್ಲಾ ಕಾರಾಗೃಹ ಮತ್ತು ಜಿಲ್ಲಾ ಆಸ್ಪತ್ರೆ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಉಚಿತ ಆರೋಗ್ಯ ಹಾಗೂ ಕಣ್ಣಿನ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

‘ಆರೋಗ್ಯ ಶಿಬಿರದಲ್ಲಿ ಮಹಿಳಾ ಮತ್ತು ಪುರುಷ ಕೈದಿಗಳಿಗೆ ಕಣ್ಣಿನ ಪರೀಕ್ಷೆ ಹಾಗೂ ಬಿಪಿ ಶುಗರ್ ಎಚ್ಐವಿ ಇನ್ನಿತರ ರೋಗಗಳ ಬಗ್ಗೆ ಪರೀಕ್ಷಿಸಿ ಸೂಕ್ತವಾದ ಚಿಕಿತ್ಸೆ ಕೊಡಲಾಯಿತು ಹಾಗೂ ಬಂಧುಗಳಿಗೆ ಕನ್ನಡಕಗಳನ್ನು ವಿತರಿಸಲಾಯಿತು.

ಕಾರಾಗೃಹ ಅಧಿಕ್ಷಕರಾದ ರಾಕೇಶ್ ಕಾಂಬಳೆ ಮಾತನಾಡಿ, ನೇತ್ರದಾನ ಮಹಾದಾನ ಆದ್ದರಿಂದ ಸತ್ತ ನಂತರ ಈ ಸುಂದರ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗದೇ ನೇತ್ರದಾನ ಮಾಡುವುದರ ಮೂಲಕ ಅಂಧರ ಬಾಳಿನಲ್ಲಿ ಆಶಾಕಿರಣವಾಗೋಣ ಎಂದು ಬಂದಿ ನಿವಾಸಿಗಳಿಗೆ ಕಿವಿ ಮಾತು ಹೇಳಿದರು.

ಆರೋಗ್ಯವು ಪ್ರತಿಯೊಬ್ಬರ ಹಕ್ಕು ನಾವು ಆರೋಗ್ಯವನ್ನು ಸದೃಢವಾಗಿಟ್ಟುಕೊಂಡರೆ ನಮ್ಮ ಮನಸ್ಥಿತಿ ನಮ್ಮ ಬದುಕು ಉತ್ತಮ ರೀತಿಯಲ್ಲಿ ಇರುತ್ತದೆ. ಅಷ್ಟೇ ಅಲ್ಲ ಕಣ್ಣುಗಳ ದೃಷ್ಟಿಯು ಸಮರ್ಪಕವಾಗಿ ಇದ್ದರೆ ಕುಳಿತ ಸ್ಥಳದಿಂದಲೆ ಜಗತ್ತನ್ನು ವೀಕ್ಷಿಸುವ ಶಕ್ತಿ ಪ್ರತಿಯೊಬ್ಬರಲ್ಲಿದೆ ಬಂದಿನಿವಾಸಿಗಳಿಗೆ ಕಣ್ಣಿನ ಮಹತ್ವದ ಬಗ್ಗೆ ತಿಳಿಸಿದರು. ಆರೋಗ್ಯ ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಕಾರಾಗೃಹ ಸಿಬ್ಬಂದಿರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net