ಸೌಹಾರ್ದ ಕದಡುವ ಪೋಸ್ಟ್ ಹಾಕಿದ್ದವ ಮಲೆಯಾಳಿ ಮೂಲದ ಯುವಕ ಸೆರೆ

mandya crime
Published on

ರಾಮನಗರ: ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದ ಕದಡುವ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಕೇರಳ ಮೂಲದ ಯುವಕನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇರಳ ಮೂಲದ ಮಹಮದ್ ಅಬ್ದುಲ್ ಎಂಬಾತ ಬಿಡದಿ ಮುಖ್ಯರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದ. ಅಂಗಡಿ ಮೇಲೆ ಪಾಕಿಸ್ತಾನದ ಬಂಟಿಂಗ್ಸ್ ಹಾಕಿದ್ದ. ಜತೆಗೆ ಫೇಸ್​ಬುಕ್ ಖಾತೆಯಲ್ಲಿ ಪಾಕ್​ನ ಧ್ವಜ ಪೋಸ್ಟ್ ಮಾಡಿ ಮಲೆಯಾಳಿ ಭಾಷೆಯಲ್ಲಿ ಬರೆದು ಕೊಂಡಿದ್ದ.

ಈ ಬಗ್ಗೆ ಹಿಂದುಪರ ಸಂಘಟನೆ ಕಾರ್ಯ ಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ವಿಚಾರಣೆಯಲ್ಲಿ ಈತ ಕೇರಳದಲ್ಲಿ ಮುಸ್ಲಿಂ ಲೀಗ್ ಸಂಘಟನೆ ಮುಖಂಡನಾಗಿದ್ದ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net