31 ವಾರ್ಡ್, 145 ಉಮೇದುವಾರಿಕೆ: ರಾಮನಗರ ನಗರಸಭೆ ಚುನಾವಣೆ 20ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಬಿಜೆಪಿ ಸ್ಪರ್ಧೆ

15-cpt-4pd
Published on

ರಾಮನಗರ :  ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆಗೆ ಒಟ್ಟು 145 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಗುರುವಾರ ಒಂದೇ ದಿನ 130 ನಾಮಪತ್ರಗಳು ಸಲ್ಲಿಕೆಯಾದವು. 31 ವಾರ್ಡ್‌ಗಳಿಗೆ ಪ್ರಮುಖ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಅಧಿಕೃತ ಬಿಾರ್ಮ್ ಜತೆ ನಾಮಪತ್ರ ಸಲ್ಲಿಸಿದರು. 20ಕ್ಕೂ ಹೆಚ್ಚು ವಾರ್ಡ್‌ಗಳಿಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಕಂಡುಬಂತು. ಉಳಿದಂತೆ ಕೆಲವು ವಾರ್ಡ್ ಗಳಿಗೆ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಟೋಕನ್ ವ್ಯವಸ್ಥೆ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ತೊಂದರೆಯಾಗದಂತೆ ಚುನಾವಣಾಧಿಕಾರಿಗಳು ಟೋಕನ್ ವ್ಯವಸ್ಥೆ ಮಾಡಿದ್ದರು. ಟೋಕನ್ ಕ್ರಮ ಸಂಖ್ಯೆ ಆಧಾರದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ನಗರಸಭೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ನಾಮಪತ್ರ ಸಲ್ಲಿಸಿದವರು

ಜೆಡಿಎಸ್: ಮಹಾಲಕ್ಷ್ಮಿಗೂಳಿಗೌಡ, ಎ.ಮಂಜುನಾಥ್, ವಿ.ಕಲಾ, ಎ.ರವಿ, ಪರ್ವಿಜ್‌ಪಾಷಾ, ಸೊಹೆಲ್, ಬಿ. ಉಮೇಶ್, ಗ್ಯಾಬ್ರಿಯಲ್, ಮಂಜುಳಾ, ಎ.ಎಸ್. ಕೃಷ್ಣಮೂರ್ತಿ, ಅನುಸೂಯ, ಪದ್ಮಶ್ರೀ, ಅಪ್ಪಿ, ಪಾರ್ವತಿ, ಪಾತಿಮಾ ಷಾ, ಮುನಾಜಿಲ್ ಆಗಾ, ಮುಜ್ಹಾವರ್, ಗಿರಿಜಾರಾಮ್, ಚಂದ್ರು, ಮುತಾಹಿರ್, ಚಂದ್ರಕಲಾ.

ಕಾಂಗ್ರೆಸ್: ಕೆ.ಶೇಷಾದ್ರಿ (ಶಶಿ), ಎ.ಬಿ. ಚೇತನ್‌ಕುಮಾರ್, ಮುತ್ತುರಾಜು, ಜಯಲಕ್ಷಮ್ಮ, ಶಿವಕುಮಾರಸ್ವಾಮಿ, ಸುಜಾತಾ, ಲೀಲಾ, ಗಿರಿಜಾ, ಅರ್ಚನಾ, ಸೂರ್ಯನಾರಾಯಣಮೂರ್ತಿ, ಮಜಹತ್‌ಜಹಾ, ಸಬೀನಾ ತಾಜ್, ಸೋಮಶೇಖರ್, ಸೈಯದ್ ಅಕ್ಲೀಂ ಇಮ್ರಾನ್, ಅಕ್ಲೀಂಅಜಾದ್, ನಿಜಾಮುದ್ದೀನ್ ಷರೀಪ್, ಮಲ್ಲಿಕಾಜಾನ್, ಮೋಯಿನ್‌ಖುರೇಶಿ, ಗಿರಿಜಮ್ಮ, ಮಹಮದ್ ಷರೀಪ್, ಇಕ್ಬಾಲ್‌ಷರೀಪ್, ಗೋವಿಂದರಾಜು, ಅಸ್ಮತ್‌ಪಾಷಾ, ಪರ್ವಿಜ್ ಪಾಷಾ, ಬಾಬು, ನರಸಿಂಹ, ಪವಿತ್ರ, ಗುರುಪ್ರಸಾದ್, ಯಾಜ್ ಪಾಷಾ, ಬಿ.ಸಿ. ಪಾರ್ವತಮ್ಮ, ವಿಜಯಕುಮಾರಿ.

ಬಿಜೆಪಿ: ಚೈತ್ರಾ ನರೇಂದ್ರ, ದರ್ಶನ್, ರುದ್ರದೇವರು, ಪಿ.ಶೋಭಾ, ಸವಿತಾ, ಮಣಿನಾಗೇಶ್, ಹರೀಶ್, ಸಾವಿತ್ರಮ್ಮ, ವಿನೋದ್ ಭಗತ್, ಪುಷ್ಪ, ವಿ. ರಾಜು, ಭುವನೇಶ್ವರಿ, ದೇವಿಕಾ, ಸವಿತಾ, ಮಂಜುಳಾ, ಪ್ರಕಾಶ್, ಶ್ರೀನಿವಾಸ್, ಆರ್.ವಿ. ಕೃಷ್ಣಪ್ಪ.

ಪಕ್ಷೇತರರು: ಜಯಮ್ಮ (27ನೇ ವಾರ್ಡ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net