

ರಾಮನಗರ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾವಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ನಾರಾಯಣಸ್ವಾಮಿ ಮತ ಪ್ರಚಾರ ನಡೆಸುವ ವೇಳೆ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಕೈ ಕೈ ಮಿಲಾಯಿಸಿದ ಟನೆ ಮಂಗಳವಾರ ನಡೆಯಿತು.
ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿಯ ಚುನಾಯಿತ ಪ್ರತಿನಿಧಿಗಳ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಭ್ಯರ್ಥಿ ನಾರಾಯಣ ಸ್ವಾಮಿ ವಾತನಾಡಿ ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದರು. ಇವರು ವಾತು ಮುಗಿಸಿ, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ವಾತು ಆರಂಭಿಸುವ ವೇಳೆಗೆ ಕಾರ್ಯಕರ್ತರು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರಶ್ನಿಸಲು ಮುಂದಾದರು. ಈ ವೇಳೆ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದು, ಕ್ಷೇತ್ರಕ್ಕೆ ಹೆಚ್ಚಿನ ಪ್ರವಾಣದಲ್ಲಿಯೇ ಅನುದಾನ ಬರುತ್ತಿದೆ.
ಆದರೆ ಈ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಯಾವ ಸಭೆಗೂ ನಮ್ಮನ್ನು ಪರಿಗಣಿಸುತ್ತಿಲ್ಲ, ಆಹ್ವಾನ ನೀಡುತ್ತಿಲ್ಲ ಎಂದು ಆರೋಪಿಸಿದರು. 35 ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಕ್ಷ ಸಂಟನೆಗಾಗಿ ಪ್ರಾವಾಣಿಕವಾಗಿ ದುಡಿದಿದ್ದೇನೆ. ಇಷ್ಟೆಲ್ಲಾ ಇದ್ದರೂ ನಮ್ಮನ್ನು ಸಭೆ ಆಹ್ವಾನಿಸದೇ ಅವವಾನ ವಾಡಲಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಮುಂದೇಯೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ದೂರು ಹೇಳಿಕೊಂಡರು.
ಜಿಲ್ಲಾ ಬಿಜೆಪಿ ಅಧ್ಯಕ್ಷರು ಚುನಾವಣೆ ಬಂದಾಗ ವಾತ್ರ ಕಾಣಿಸಿಕೊಳ್ಳುತ್ತಾರೆ. ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅನುದಾನ ನೀಡಿದ್ದರೆ, ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿದ್ದರು. ಆದರೆ, ರಾಮನಗರ ಜಿಲ್ಲಾಧ್ಯಕ್ಷ ಮತ್ತು ಆಯಾ ತಾಲೂಕಿನ ಮಂಡಲ ಅಧ್ಯಕ್ಷರಿಂದಾಗಿ ಪಕ್ಷದ ಅಭ್ಯರ್ಥಿಗಳು ಸೋಲಬೇಕಾಯಿತು ಎಂದು ಆಕ್ರೋಶ ಹೊರಹಾಕಿದರು.
ಮೊಬೈಲ್ ಚಿತ್ರೀಕರಣ ಗಲಾಟೆಗೆ ಮೂಲ : ಪದಾಧಿಕಾರಿಯೊಬ್ಬರು ಗಲಾಟೆ ನಡೆಯುತ್ತಿದ್ದುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದನ್ನು ಕಂಡ ಕಾರ್ಯಕರ್ತರು ಮೊಬೈಲ್ ಆಫ್ ವಾಡುವಂತೆ ಸೂಚಿಸಿದ್ದಾರೆ. ಆದರೂ ಚಿತ್ರೀಕರಣ ಮುಂದುವರಿಸಿದಾಗ, ಕಾರ್ಯಕರ್ತರು ಪದಾಧಿಕಾರಿಯ ಮೇಲೆ ಮುಗಿಬಿದ್ದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆ ಕೈಕೈ ಮಿಲಾಯಿಸುವ ಹಂತ ತಲುಪಿತು. ಗಲಾಟೆ ನಿಲ್ಲಿಸಲು ಅಭ್ಯರ್ಥಿ ನಾರಾಯಣ ಸ್ವಾಮಿ ಪ್ರಯತ್ನಿಸಿದರಾದರೂ ಬಗ್ಗದ ಕಾರ್ಯಕರ್ತರು ಗಲಾಟೆ ಮುಂದುವರಿಸಿದರು.
ಜಿಲ್ಲೆಯ ಕಾರ್ಯಕರ್ತರನ್ನು ಕರೆದು ಕೆಲಸ ವಾಡಲು ಅವಕಾಶ ವಾಡಿಕೊಡುತ್ತೇನೆಯೇ ಹೊರತು, ತಡೆಯುವ ಉದ್ದೇಶ ಇಲ್ಲ. ನನ್ನ ಜೊತೆ ಕೆಲಸ ವಾಡಿದವರು ಇಂದು ಅಭ್ಯರ್ಥಿಯಾಗಿದ್ದಾರೆ. ಅವರ ಗೆಲುವಿಗೆ ಹೆಗಲು ನೀಡುವುದೇ ನಮ್ಮ ಉದ್ದೇಶ. ಇಲ್ಲಿ ಯಾರನ್ನೂ ಕಡೆಗಣಿಸಿಲ್ಲ. ಹುಲುವಾಡಿ ದೇವರಾಜು ಬಿಜೆಪಿ ಜಿಲ್ಲಾಧ್ಯಕ್ಷ, ರಾಮನಗರ