

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಕ್ಕಿ ವಿಚಾರದ ಕುರಿತು ಇದೀಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಬಿಜೆಪಿ(BJP) ಮತ್ತು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ರಾಮಲಿಂಗಾ ರೆಡ್ಡಿ, "ಅಕ್ಕಿ ಬಗ್ಗೆ ಬಿಜೆಪಿಯವರು ಲೇವಡಿ ಮಾಡುತ್ತಿದ್ದಾರೆ. ತಿನ್ನೋದು ಸೋನಾ ಮಸೂರಿ ಟೀಕೆ ಮಾಡಿ ಮಾತನಾಡುವುದು ಬಡವರ ಅಕ್ಕಿ ಬಗ್ಗೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಶೋಭಾ ಕರಂದ್ಲಾಜೆಯವರಿಗೆ(Shobha Karandlaje) ನಾನು ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಮೊನ್ನೆ ಸಿದ್ದರಾಮಯ್ಯ ಅವರನ್ನು ನೀವು ಟೀಕಿಸಿದ್ದೀರಿ ಅಲ್ವಾ? ಇಂದು ಏಕೆ ಸುಮ್ಮನಿದ್ದೀರಾ? ಇವಾಗ ನಿಮಗೆ ಡ್ಯಾನ್ಸ್ ನೆನಪಿಲ್ವಾ? ಎಲ್ಲಿ ನಾಪತ್ತೆಯಾಗಿದ್ದೀರಾ ಶೋಭ ಅವರೇ?" ಎಂದು ಪ್ರಶ್ನಿಸುವ ಮುಖೇನ ರಾಜ್ಯ ಬಿಜೆಪಿಯನ್ನು ಟೀಕಿಸಿದ್ದಾರೆ.