ಬಸ್​​ಗಳು ರಶ್ ಆಗಿ ಸ್ವಲ್ಪ ಸಮಸ್ಯೆಯಾಗಿದೆ, ತಿಂಗಳೊಳಗೆ ಇದೆಲ್ಲಾ ಸರಿಹೋಗಲಿದೆ: ಸಚಿವ ರಾಮಲಿಂಗಾ ರೆಡ್ಡಿ

ramalinga reddy
Published on

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಿದ ಬೆನ್ನಲ್ಲೇ ಸಾರಿಗೆ ಬಸ್​​​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದು ಇದೀಗ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿ ಪರಿವರ್ತಿಸಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga Reddy) ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.

"ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಬಸ್​​ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ, ಹಾಗಾಗಿ ಬಸ್​​ಗಳಲ್ಲಿ ರಶ್ ಆಗಿ ಸ್ವಲ್ಪ ಸಮಸ್ಯೆಯಾಗಿದೆ. ಇದೆಲ್ಲಾ ತಿಂಗಳೊಳಗೆ ಸರಿಯಾಗಲಿದೆ" ಎಂದು ಹೇಳಿದ್ದಾರೆ.

"ಒಮ್ಮೆ ದೇವಸ್ಥಾನಕ್ಕೆ ಹೋದವರು ಪದೇ ಪದೇ ಹೋಗುವುದಿಲ್ಲ. ಈ ವಾರಂತ್ಯದಲ್ಲಿ ಕೆಲ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಬಿಡಲಾಗುವುದು. ನಮಗೆ ಎಷ್ಟೇ ಕಷ್ಟ ಎದುರಾದರೂ ಸದ್ಯದ ನಿಯಮವನ್ನು ಬದಲಾಯಿಸುವ ಮಾತಿಲ್ಲ" ಎಂದು ಹೇಳಿದ್ದಾರೆ.

"ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ(Students) ಬಸ್ ಸ್ಟಾಪ್​​ಗಳಲ್ಲಿ ಕಡ್ಡಾಯವಾಗಿ ನಿಲುಗಡೆ ಕೊಡಬೇಕು. ಈ ಕುರಿತು ಈಗಾಗಲೇ ನಾವು ಅಧಿಕಾರಿಗಳ ಮುಖಾಂತರ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದೇವೆ. ಪುಣ್ಯ ಕ್ಷೇತ್ರಗಳ ಮಾರ್ಗದಲ್ಲಿ ಹೋಗುತ್ತಿರುವ ಬಸ್​​ಗಳು ಹೆಚ್ಚು ರಶ್ ಆಗುತ್ತಿವೆ. ಸದ್ಯದಲ್ಲೇ ಕ್ರಮೇಣವಾಗಿ ಅಲ್ಲಿನ ಸಮಸ್ಯೆ ಬಗೆಹರಿಯಲಿದೆ" ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net