ಇನ್ಮುಂದೆ ನಾನು ಮಹಿಳೆಯರನ್ನು ನೋಡುವುದೇ ಇಲ್ಲ! ಹೊಸ ವರ್ಷಕ್ಕೆ RGV ರೆಸಲ್ಯೂಷನ್‌..Ram Gopal Varma

Ramgopal Varma - Final
Published on

ಮುಂಬೈ: ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ( Ram Gopal Varma ) ಹೊಸ ವರ್ಷದ  ಹಿನ್ನೆಲೆ ಕೆಲವು ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ. ಈ ನಿಟ್ಟಿನಲ್ಲಿ  ನಿರ್ದೇಶಕರು 2025 ರಲ್ಲಿ ಅವರ ನಿರ್ಣಯಗಳ ಬಗ್ಗೆ ಹೇಳುವ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ  ಟ್ವೀಟ್​​ ವೈರಕ್​ ಆಗುತ್ತಿದ್ದಂತೆ ನೆಟ್ಟಿಗರು ತರಹೆವಾರಿ ಕಾಮೆಂಟ್​​ ಮಾಡುತ್ತಿದ್ದಾರೆ.

ಈ ವರ್ಷ ನಾನು ತೆಗೆದುಕೊಂಡ 7 ನಿರ್ಣಯ

    1.   ಇನ್ಮುಂದೆ ವಿವಾದಕ್ಕೀಡಾಗದೇ ಇರಲು ನಿರ್ಧರಿಸಿದ್ದೇನೆ
    2. ನನಗೂ ಒಳ್ಳೆಯ ಕುಟುಂಬಸ್ಥನಾಗಬೇಕು
    3.  ನನಗೆ ದೇವರ ಮೇಲೆ ಭಯ ಭಕ್ತಿ ಇದೆ
    4.   ಇನ್ನು ಮುಂದೆ ಪ್ರತಿ ವರ್ಷ ಸತ್ಯದಂತೆ 10 ಸಿನಿಮಾ ಮಾಡುತ್ತೇನೆ.
    5.  ನಾನು ಯಾರ ಬಗ್ಗೆಯೂ ನಕಾರಾತ್ಮಕ ಟ್ವೀಟ್‌ಗಳನ್ನು ಅಥವಾ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವುದಿಲ್ಲ
    6.   ನಾನು ಮಹಿಳೆಯರನ್ನು ನೋಡುವುದೇ ಇಲ್ಲ
    7.   ನಾನು ವೋಡ್ಕಾ ಕುಡಿಯುವುದನ್ನು ಸಹ ನಿಲ್ಲಿಸುತ್ತೇನೆ

'ಇವನ್ನೆಲ್ಲ ನಾನು ಖಂಡಿತಾ ಅನುಸರಿಸುತ್ತೇನೆ ಎಂದು ನಿಮ್ಮೆಲ್ಲರ ಮೇಲೆ ಆಣೆ ಹಾಕುತ್ತೇನೆ. ರಾಮ್ ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಟ್ವಿಸ್ಟ್ ನೀಡಿದ್ದಾರೆ. ಜೊತೆಗೆ ಎಲ್ಲರಿಗೂ 'ಹೊಸ ವರ್ಷದ ಶುಭಾಶಯಗಳು' ಎಂದು ಶುಭ ಹಾರೈಸಿದರು.

ಸದ್ಯ ರಾಮ್ ಗೋಪಾಲ್ ವರ್ಮಾ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಸಿನಿಮಾ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಇದೆಲ್ಲ ಮಾಡೋಕೆ ಆಗಲ್ಲ ವರ್ಮಾ'... ನಿಮ್ಮಿಂದ ಅಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net