

ಆಂಧ್ರಪ್ರದೇಶ: ಕೆಲವು ದಿನಗಳ ಹಿಂದೆಯಷ್ಟೇ ಟಾಲಿವುಡ್ ನಟ ರಾಮ್ ಚರಣ್ (Ram Charan) ಮತ್ತು ಉಪಾಸನಾ ದಂಪತಿಗಳಿಗೆ ಹೆಣ್ಣು ಮಗ ಜನಿಸಿತು. ಇದೀಗ ಮಗುವಿನ ನಾಮಕರಣ ಸಮಾರಂಭ ನಡೆದಿದ್ದು, ಹಿರಿಯ ನಟ ಚಿರಂಜೀವಿ ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಹೆಣ್ಣು ಮಗು ಜನಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಹಿರಿಯ ನಟ ಮೆಗಾ ಸ್ಟಾರ್ ಚಿರಂಜೀವಿ (Chiranjeevi), ನಾಮಕರಣ ಸಮಾರಂಭದಲ್ಲಿ ಮೊಮ್ಮಗಳ ಹೆಸರನ್ನು ಎಲ್ಲರ ಸಮ್ಮುಖದಲ್ಲಿ ಘೋಷಿಸಲಾಗುವುದು ಎಂದು ಹೇಳಿದ್ದರು. ಅದರಂತೆಯೇ ಇಂದು ಅಭಿಮಾನಿಗಳಿಗೆ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಇಂದು ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಗುವಿನ ಹೆಸರು 'ಕ್ಲಿನ್ ಕಾರ ಕೊನಿಡೆಲಾ' ಎಂದು ನಟ ಚಿರಂಜೀವಿ ಹೇಳಿದರು. ಈ ಹೆಸರನ್ನು ಇಡಲು ಕಾರಣವೇನು ಎಂಬುದಕ್ಕೆ ಉತ್ತರಿಸಿದ ಅವರು, "ಆ ಹೆಸರನ್ನು ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆ. 'ಕ್ಲಿನ್ ಕಾರ' ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ಮುಧೋಳಲ್ಲಿ ಇನ್ನರ್ವ್ಹೀಲ್ ಕ್ಲಬ್ ಉದ್ಘಾಟನೆ
"ನಮ್ಮ ಪುಟ್ಟ ಮಗು, ಲಿಟಲ್ ಪ್ರಿನ್ಸೆಸ್ ಈ ಎಲ್ಲಾ ಗುಣಗಳನ್ನು ಮುಂದಿನ ದಿನಗಳಲ್ಲಿ ತನ್ನ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುತ್ತಾಳೆ" ಎಂದು ಟ್ವೀಟ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).