ರಾಮ್​ಚರಣ್​ ನೆಕ್ಸ್ಟ್ ಸಿನಿಮಾ ರಿಲೀಸ್​ ಯಾವಾಗ ಗೊತ್ತಾ; ನಿರ್ಮಾಪಕರು ಕೊಟ್ಟ ಸ್ಪಷ್ಟನೆ ಹೀಗಿದೆ

Untitled-design-2024-08-27T173725.027
Published on

ಹೈದರಾಬಾದ್​​: ಟಾಲಿವುಡ್​ನ ಮೆಗಾಪವರ್​ಸ್ಟಾರ್​ ರಾಮಚರಣ್​ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ ಗೇಮ್​ ಚೇಂಜರ್​ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ 2021ರಲ್ಲಿ ಆರಂಭವಾಯಿತು. ಇತ್ತೀಚೆಗೆ ಗೇಮ್​ ಚೇಂಜರ್​ ಸಿನಿಮಾ ಮುಂದಿನ ವರ್ಷ ಅಂದರೆ 2025ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ತೆಲುಗು ಚಿತ್ರರಂಗದಿಂದ ಕೇಳಿಬರುತಿತ್ತು.

ರಾಮ್ ಚರಣ್ ಅವರ ಕೆಲವು ಭಾಗಗಳನ್ನು ರೀಶೂಟ್ ಮಾಡುವುದರಿಂದ ಹಾಗೂ ಪೋಸ್ಟ್-ಪ್ರೊಡಕ್ಷನ್‌ಗೆ ಸಮಯದ ಅಗತ್ಯತೆ ಇರುವುದರಿಂದ ಸಿನಿಮಾ ಬಿಡುಗಡೆ ದಿನಾಂಕವೂ ಮುಂದೂಡಿಕೆಯಾಗಿದೆ ಎಂದು ಹೇಳಲಾಗುತಿತ್ತು. ಇದನ್ನು ಕೇಳಿದೆ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೀಗ ಸಿನಿಮಾ ಬಿಡುಗಡೆ ಬಗ್ಗೆ ಗೇಮ್​ ಚೇಂಜರ್​​ ಚಿತ್ರದ ನಿರ್ಮಾಪಕ ದಿಲ್​ ರಾಜು ಒಂದು ಕ್ಲಾರಿಟಿ ಕೊಟ್ಟಿದ್ದಾರೆ.

ನಿರ್ಮಾಪಕ ದಿಲ್ ರಾಜು ಅವರು ಗೇಮ್ ಚೇಂಜರ್‌ನ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷದ ಕ್ರಿಸ್‌ಮಸ್ ಸಮಯದಲ್ಲಿ ಅದರ ಬಿಡುಗಡೆಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಈ ಚಿತ್ರವು ಶಂಕರ್ ಸರ್ ಮತ್ತು ರಾಮಚರಣ್​​ ಅವರ ಸಿನಿಮಾಗಳ ಬಗ್ಗೆ ಇರುವ ಚಿತ್ರಣವನ್ನು ಬದಲಾಯಿಸುತ್ತದೆ. ರೋಬೋಟ್‌ಗಿಂತ ಮೊದಲು ಶಂಕರ್ ಸರ್ ಯಾವ ಶೈಲಿಗೆ ಹೆಸರಾಗಿದ್ದರು ಎಂಬುದಕ್ಕೆ ಇದು ಸರಿಯಾದ ಕಮರ್ಷಿಯಲ್ ಚಿತ್ರ ಆಗಿದೆ. ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಯಾವುದೇ ಡೌಟ್​ ಇಲ್ಲ. ಈ ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯುತ್ತದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ಈ ಮೊದಲು ವಿನಯ ವಿಧೇಯ ರಾಮ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ರಾಮ್​ಚರಣ್​ ಹಾಗೂ ಕಿಯಾರಾ ಅಡ್ವಾಣಿ ಮತ್ತೊಮ್ಮೆ ಕಮಾಲ್​ ಮಾಡಲು ಗೇಮ್​ ಚೇಂಜರ್​ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಡ್ರಾಮಾ ಆಗಿದ್ದು, ಬಹುದೊಡ್ಡ ತಾರಗಣವನ್ನು ಹೊಂದಿದೆ. ದಿಲ್​ ರಾಜು ಅವರ ಹೇಳಿಕೆಗಳನ್ನು ಕೇಳಿ ಸಿನಿಮಾ ರಿಲೀಸ್​ಗಾಗಿ ಅಭಿಮಾನಿಗಳು ಹೆಚ್ಚು ಉತ್ಸುಕರಾಗಿ ಕಾಯುತ್ತಿದ್ದಾರೆ. ಗೇಮ್​ ಚೇಂಜರ್​ ಎಷ್ಟರ ಮಟ್ಟಿಗೆ ಕಮಾಲ್​ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net