ಸಿಜೆಐ ಡಿವೈ ಚಂದ್ರಚೂಡ್​ ಅವರ ಹೆಸರಲ್ಲಿ ವಂಚನೆಗೆ ಯತ್ನ; ವಂಚಕನಿಗೆ ತೀರ್ಪು ನೀಡಿದ ನೆಟ್ಟಿಗರು

Untitled-design-2024-08-27T165543.667
Published on

ಇತ್ತೀಚಿನ ಡಿಜಿಟಲ್​ ಯುಗದಲ್ಲಿ ವಂಚನೆ ಎಂಬ ವಿಷಯ ಸಾಮಾನ್ಯವಾಗಿದೆ. ಯಾರು ಹೇಗೆ ವಂಚನೆ ಮಾಡುತ್ತಾರೆ ಎಂದು ಹೇಳುವುದು ಅಸಾಧ್ಯ. ಆನ್​ಲೈನ್​ ಬ್ಯಾಂಕಿಂಗ್​​ ಹಗರಣದಿಂದ ಹಿಡಿದು ನಾರ್ಮಲ್​ ಮೆಸೇಜ್​​ ಕಳುಹಿಸುವ ಮೂಲಕ ಜನರನ್ನು ಹೇಗೆ ಮೋಸ ಮಾಡುತ್ತಾರೆ ಎಂಬ ಸುದ್ದಿ ಆಗಾಗ್ಗೆ ಕೇಳುತ್ತಿರುತ್ತೇವೆ. ಕೆಲವೊಮ್ಮೆ ಕಡಿಮೆ ಮೊತ್ತದ ದುಡ್ಡಿಗೆ ಮೋಸ ಮಾಡಿದರೆ, ಇನ್ನೂ ಕೆಲವೊಮ್ಮೆ ನಿರೀಕ್ಷೆಗಿಂತ ಹೆಚ್ಚಿನದಾಗಿ ಹಾನಿಯುಂಟು ಮಾಡುವಷ್ಟರ ಮಟ್ಟಿಗೆ ನೈಜ್ಯವಾಗಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ.

ಸೆಲಿಬ್ರಿಟಿ, ಫೇಮಸ್​​​ ಬ್ಯುಸಿನೆಸ್ ಪರ್ಸನ್​​, ಹೈಪ್ರೊಫೈಲ್​​ ವ್ಯಕ್ತಿಗಳ ಹೆಸರನ್ನು ಹೇಳಿ ವಂಚಿಸುವವರು ಕೆಲವರಿದ್ದರೆ. ಮತ್ತೆ ಕೆಲವರು ಲೋನ್​​ ನೀಡುವುದಾಗಿ, ಜಾಕ್​ಪಾಟ್​ ಹೊಡೆದಿರುವುದಾಗಿ ಹೇಳಿ ಪಂಗನಾಮ ಹಾಕುತ್ತಿರುತ್ತಾರೆ. ಅಂದ್ಹಾಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದ ಪೋಸ್ಟ್​ ವೈರಲ್​ ಆಗುತ್ತಿದೆ. ಅದರಲ್ಲಿ ಭಾರತೀಯ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​​​ ಅವರು 500 ರೂಪಾಯಿ ಕೇಳುತ್ತಿರುವುದನ್ನು ಕಾಣಬಹುದಾಗಿದೆ.

ಈ ಪೋಸ್ಟ್​​ ಅನ್ನು ಸಾಮಾಜಿಕ ಜಾಲತಾಣ ಎಕ್ಸ್​​ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಅದರಲ್ಲಿ ಮೋಸಗಾರನೊಬ್ಬ ಸಿಜೆಐ ಡಿವೈ ಚಂದ್ರಚೂಡ್​ ಅವರಂತೆ ನಟಿಸುತ್ತಾ ಮೆಸೇಜ್​ ಒಂದನ್ನು ಕಳುಹಿಸಿದ್ದಾನೆ. ಆ ಮೆಸೇಜ್​ನಲ್ಲಿ, ಹಲೋ ನಾನು ಸಿಜೆಐ, ನನಗೆ ಕೊಲಿಜಿಯಂ ಮೀಟಿಂಗ್​ ಇದೆ. ಆದರೆ ನಾನು ದೆಹಲಿಯ ಕನ್ನಾಟ್ ಸ್ಥಳದಲ್ಲಿ ಸಿಲುಕಿಕೊಂಡಿದ್ದೇನೆ. ಕ್ಯಾಬ್​​ಗಾಗಿ 500 ರೂಪಾಯಿ ಕಳುಹಿಸಿ. ನ್ಯಾಯಾಲಯಕ್ಕೆ ತಲುಪಿದ ತಕ್ಷಣ ನಿಮ್ಮ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ 500 ರೂಪಾಯಿಯನ್ನು ಐಪ್ಯಾಡ್​ ಮೂಲಕ ಕಳುಹಿಸುವಂತೆ ತಿಳಿಸಿದ್ದಾರೆ.

ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿರುವ ಈ ಪೋಸ್ಟ್​ ಅನ್ನು ಭಾನುವಾರ (ಆಗಸ್ಟ್​ 25) ಹಂಚಿಕೊಳ್ಳಲಾಗಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ಈ ಪೋಸ್ಟ್​ ಅನ್ನು ವೀಕ್ಷಿಸಿದ್ದು, 2,500ಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ. ಈ ಪೋಸ್ಟ್​​​ ಅನ್ನು ಹಲವರು ಪ್ರತಿಕ್ರಿಸಿದ್ದಾರೆ. ಆತನ ಓವರ ಕಾನ್ಫಿಡೆನ್ಸ್​ಗೆ 1000 ರೂಪಾಯಿ ಕಳುಹಿಸಿ, ಈ ಪ್ರಕರಣದ ವಿಚಾರಣೆ ಮೂರು ವಾರಗಳ ನಂತರ ನಡೆಸಲಾಗುವುದು ಹಾಗೂ ತೀರ್ಪು ನೀಡಲು ತ್ರಿಸದಸ್ಯ ಪೀಠವನ್ನು ರಚಿಸಿ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net