

ಆಂಧ್ರಪ್ರದೇಶ: ತೆಲುಗು ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಪ್ರೀತ್ ಸಿಂಗ್ನನ್ನು ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ರಾಜೇಂದ್ರನಗರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಇಂದು ರಾಕುಲ್ ಪ್ರೀತ್ ಸಿಂಗ್ ಮನೆಗೆ ಧಾವಿಸಿದ ಪೊಲೀಸರು, ನಟಿಯ ಸಹೋದರ ಅಮನ್ ಪ್ರೀತ್ ಸಿಂಗ್ರನ್ನು ಬಂಧಿಸಿದ್ದು, ಆತನಿಂದ 200 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಐವರು ನೈಜೀರಿಯನ್ ಪ್ರಜೆಗಳನ್ನು ಸಹ ಬಂಧಿಸಲಾಗಿದೆ. ಅಮನ್‌ನಿಂದ ಸಿಕ್ಕಿಬಿದ್ದಿರುವ ಮಾದಕ ವಸ್ತುಗಳ ಮೌಲ್ಯ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಈಗಾಗಲೇ ತನಿಖೆಯನ್ನು ಕೈಗೊಂಡಿರುವ ಪೊಲೀಸರು ಅಮನ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮೂರು ಇಲಾಖೆಗಳು ಜಂಟಿ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಆರೋಪ ಎದುರಿಸುತ್ತಿದ್ದರು. ಆದರೆ ತನಿಖೆಯ ನಂತರ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು,(ಏಜೆನ್ಸೀಸ್).