ಕಿಂಗ್​ ಎಲ್ಲೇ ಇದ್ರು ಕಿಂಗ್, ಹೊರಗೆ​ ಬಂದೇ ಬರ್ತಾರೆ; ದಚ್ಚು ಕುರಿತು ರಕ್ಷಕ್​ ಹೇಳಿಕೆ ವೈರಲ್​

Rakshak Bullet
Published on

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್​ ಬಳ್ಳಾರಿ ಜೈಲಿನಲ್ಲಿ ದಿನ ದೂಡುತ್ತಿದ್ದು, ಜಾಮೀನಿನ ಮೇಲೆ ಹೊರಬರಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್​ನಟನೊಬ್ಬನ ಈ ಹೇಯ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಬಗ್ಗೆ ಬಿಗ್​ಬಾಸ್​ ಸೀಸನ್​​-10ರ ಸ್ಫರ್ಧಿ ರಕ್ಷಕ್​ ಬುಲೆಟ್​ ಮಾತನಾಡಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಒಂದರಲ್ಲಿ ಈ ಕುರಿತು ಮಾತನಾಡಿರುವ ರಕ್ಷಕ್​ ಬುಲೆಟ್​, ರೇಣುಕಸ್ವಾಮಿ ಹತ್ಯೆ ಪ್ರಕರಣದ ಕುರಿತು ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಕಿಡಿಕಾರಿ ಕಮೆಂಟ್​ ಮಾಡಿದ್ದು, ಹಲವರು ಇವರನ್ನು ಟೀಕಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಯಾರೋ ಒಬ್ಬ ಗಲಿಯಲ್ಲಿ ಮರ್ಡರ್​ ಮಾಡಿದರೆ ರೇಪ್​ ಮಾಡುದ್ರೆ ಜನ ಹೆಚ್ಚಾಗಿ ಅದರ ಬಗ್ಗೆ ತೆಲೆಕೆಡಿಸಿಕೊಳ್ಳುತ್ತಿರಲಿಲ್ಲ. ಡಿ ಬಾಸ್​ ಅನ್ನೊ ಹೆಸರು ಕೇಳಿ ಬಂದಿದ್ಯಲ್ಲ ಅದಕ್ಕೆ ಪ್ರಕರಣ ಇಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡಿದೆ. ಎಲ್ಲಿಗೂ ಹೋಗಲ್ಲ ಬರ್ತಾರೆ. ಕಿಂಗ್​ ಎಲ್ಲೇ ಇದ್ರು ಕಿಂಗ್​, ರಾಜ ಯಾವತ್ತಿದ್ರೂ ರಾಜನೇ. ಯಾವುದರ ಬಗ್ಗೆನೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರ ಹೊರಗೆ​ ಬಂದೇ ಬರ್ತಾರೆ ತೊಂದ್ರೆಯಿಲ್ಲ.

ನೂರು ಜನ ನೂರು ಹೇಳಬಹುದು ಮೊನ್ನೆ ಸ್ಟೇಜ್​ ಅಲ್ಲು ಹೇಳ್ತಾ ಇದ್ದೆ. ನಾಲಿಗೆ ಒಂದೇ ಆಗಿರಬೇಕು ಪ್ರತಿಯೊಬ್ಬರ ಮನುಷ್ಯನಿಗೂ ಯಾಕೆ ಅಂದರೆ ಮನುಷ್ಯ ನಿಂತಿದಾಗ ಅಲ್ಲಾ ಬಿದ್ದಾಗಿ ಚೆನ್ನಾಗಿ ಮಾತಾಡ್ತಾರೆ. ಅವನು ಇವನು ಮೇಲು ಕೀಳು ಅಂತಾ ನಾನು ಲೈಫಲ್ಲಿ ಯಾವತ್ತೂ ಮಾತಾಡಿಲ್ಲ. ನನಗೆ ಅದನ್ನು ಯೂಸ್​ ಮಾಡೋಕೆ ಇಷ್ಟವಿಲ್ಲ. ಲೈಫ್​ ಅಲ್ಲಿ ಎಲ್ಲರಿಗೂ ಕಷ್ಟ ಬಂದಿದೆ ಎಂದು ಬಿಗ್​ಬಾಸ್​ ಸೀಸನ್​​-10ರ ಸ್ಫರ್ಧಿ ರಕ್ಷಕ್​ ಬುಲೆಟ್​ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net