ಬಾಂಧವ್ಯ ಬೆಸೆಯುವ ರಕ್ಷಾ ಬಂಧನ

3sri4
ಶೃಂಗೇರಿಯ ರೋಟರಿ ಭವನದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
Published on

ಶೃಂಗೇರಿ: ಪೌರಾಣಿಕ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿ ಹಿನ್ನಲೆಯುಳ್ಳ ರಕ್ಷಾ ಬಂಧನ ನಮ್ಮ ಸಮಾಜದಲ್ಲಿ ಬಾಂಧವ್ಯ ಬೆಸೆಯುವ ಹಬ್ಬವಾಗಿ ರಕ್ಷಾಬಂಧನ ಪ್ರಮುಖ ಸ್ಥಾನ ಪಡೆದಿದೆ ಎಂದು ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜುನಾಥಗೌಡ ಹೇಳಿದರು.
ಶಾರದಾ ನಗರದಲ್ಲಿರುವ ರೋಟರಿ ಭವನದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಏರ್ಪಡಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಭಾತೃತ್ವದ ಸಂಕೇತವಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು, ರವೀಂದ್ರನಾಥ ಟ್ಯಾಗೂರ್ ದೇಶದಲ್ಲಿ ಹಬ್ಬವನ್ನು ಆರಂಭಿಸಿದರು. ಬಂಗಾಳ ವಿಭಜನೆ ನಂತರ ಹಿಂದು ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ಅನ್ಯ ಪುರುಷರಿಂದ ರಕ್ಷಣೆ ಅಭಯ ನೀಡುವುದು ಮುಖ್ಯ ಉದ್ದೇಶವಾಗಿತ್ತು ಎಂದರು.
ತಾಲೂಕು ಸಂಚಾಲಕ ನಾಗೇಶ್ ಕಾಮತ್ ಮಾತನಾಡಿ, ಒಡ ಹುಟ್ಟಿದವರ ನಡುವೆ ಇರುವ ಅವಿನಾವಭಾವ ಬಂಧದ ಆಚರಣೆಯಾಗಿದೆ. ಈ ಮೂಲಕ ಸಹೋದರರು ನೀಡುವ ಅಭಯವಾಗಿದೆ ಎಂದರು.
ನಗರ ಸಂಚಾಲಕಿ ಪದ್ಮ ಸುಬ್ರಹ್ಮಣ್ಯ, ರವಿಕುಮಾರ್, ಗುರುರಾಜ್, ಗಾಯತ್ರಿ, ಪೂರ್ಣಿಮಾ, ಜಯಶ್ರೀ ವಿಶ್ವನಾಥ್, ಆಶಾ ಪ್ರಸಾದ್, ನಂದಿನಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net