ಮಧ್ಯಪ್ರದೇಶದ ಜನರಿಗೆ ರಕ್ಷಾ ಬಂಧನ ಗಿಪ್ಟ್ ನೀಡಿದ ಸಿಎಂ ಮೋಹನ್ ಯಾದವ್​ | Mohan Yadav

Dr mohan yadav
Published on

Mohan Yadav: ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದ ಮಧ್ಯಪ್ರದೇಶ ಸರ್ಕಾರ, ದಿವ್ಯಾಂಗರಿಗೆ ಸಹಾಯಕ ಸಾಧನಗಳನ್ನು ವಿತರಿಸಲು ಇಂದೋರ್ ವಿಭಾಗದ ಅಗರ್-ಮಾಲ್ವಾದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಧ್ಯಪ್ರದೇಶ ಸಿಎಂ ಮೋಹನ್​ ಯಾದವ್​ ಮುಂಬರುವ ದಿನಗಳು ಮಹಿಳೆಯರ ಪಾಲ್ಗೊಳ್ಳುವಿಕೆಗೆ ಸಾರ್ವಜನಿಕ ವ್ಯವಸ್ಥೆ ಮುಕ್ತವಾಗಿರಲಿವೆ ಎಂದರು. ದಿವ್ಯಾಂಗರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಿದ ಯಾದವ್​, ಉತ್ತಮ ಜೀವನ ನಡೆಸಲು ಸಹಾಯ ಮಾಡುವ 52 ಲಕ್ಷಕ್ಕೂ ಹೆಚ್ಚು ಮೌಲ್ಯದ ತ್ರಿಚಕ್ರ ವಾಹನಗಳನ್ನು ಪಡೆದ ಫಲಾನುಭವಿಗಳನ್ನು ಅಭಿನಂದಿಸಿದರು ಎಂದು ವರದಿಯಾಗಿದೆ.

ಲಾಡ್ಲಿ ಬೆಹ್ನಾಗಳಿಗೆ ರಕ್ಷಾ ಬಂಧನ ಬಂಪರ್​​ ಗಿಪ್ಟ್​​

ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಲಾಡ್ಲಿ ಬೆಹ್ನಾ ಯೋಜನೆಯ ಬಗ್ಗೆ ದೊಡ್ಡ ಘೋಷಣೆ ಹೊರಡಿಸಿದ್ದು, ಪರೇಡ್ ಮೈದಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಲಾಡ್ಲಿ ಬೆಹ್ನಾ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಪ್ರಸ್ತುತ ನೀಡುತ್ತಿದ್ದ 1500 ರೂ.ಗಳನ್ನು 3000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು. ಈ ಹಿಂದೆ ಯೋಜನೆ ಘೋಷಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಈ ಯೋಜನೆಯನ್ನು ವಿರೋಧಿಸಿತ್ತು ಮತ್ತು ಚುನಾವಣಾ ಯೋಜನೆ ಎಂದು ಕರೆದಿತ್ತು, ಆದರೆ ನಮ್ಮ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ ಮತ್ತು ಮೊತ್ತವನ್ನು ದ್ವಿಗುಣಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net