ಬೆಂಗಳೂರು : ಡಾನ್ ಡ್ಯಾನಿ (ಸುರೇಶ್) ಹೇಳುವ ಯಾವುದೇ ಡೀಲ್ ಆಗಲಿ ಅದನ್ನು ಸರಾಗವಾಗಿ ಮಾಡಿ ಮುಗಿಸುವವ ರಕ್ಕಿ. ಆತನಿಗೆ ಅದೆಷ್ಟು ಪೊಗರು, ಧಿಮಾಕು ಎಂದರೆ ಡ್ಯಾನಿ ಮಗಳನ್ನೇ ಲವ್ ಮಾಡುತ್ತಿರುತ್ತಾನೆ. ಇದು ಡಾನ್‌ಗೆ ಒಂದು ರೀತಿಯಲ್ಲಿ ಇರುಸು-ಮುರುಸು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತ ನಿರ್ಧರಿಸುವ ತನಗೆ ಬರುವ ದೊಡ್ಡ ಡೀಲ್‌ಅನ್ನು ಡ್ಯಾನಿ, ರಕ್ಕಿ ಮತ್ತು ಗಣೇಶ್‌ಗೆ (ಸಂಪತ್) ನೀಡುತ್ತಾನೆ. ಡೀಲ್ ಮುಗಿಸಲು ಇಬ್ಬರೂ ಕೆಜಿಎ್ನತ್ತ ತೆರಳುತ್ತಾರೆ. ಇನ್ನೇನು ಡ್ಯಾನಿ ಹೇಳಿರುವ ವ್ಯಕ್ತಿಯನ್ನು ಗಣೇಶ್ ಮುಗಿಸಬೇಕು ಎನ್ನುವಷ್ಟರಲ್ಲಿ ಅಲ್ಲಿ ರಕ್ಕಿಯ ಮಾಜಿ ಪತ್ನಿ ಚಾಂದಿನಿ (ಆಶಿಕಾ) ಕಾಣುತ್ತಾಳೆ. ಡೀಲ್ ಮುಗಿಸಲು ಬಂದ ರಕ್ಕಿಗೆ ಮಾನಸಿಕ ತೊಳಲಾಟ ಶುರುವಾಗುತ್ತದೆ. ಡಾನ್ ಹೇಳಿದ ಕೆಲಸ ಮಾಡಬೇಕಾ ಅಥವಾ ಮಾಜಿ ಪತ್ನಿಗೆ ಕ್ಷಮಾದಾನ ನೀಡಬೇಕಾ? ಎಂಬ ಸಂಕೋಲೆಯಲ್ಲಿ ರಕ್ಕಿ ಸಿಲುಕಿಕೊಳ್ಳುತ್ತಾನೆ. ಮುಂದೇನು? ಎಂದು ತಿಳಿಯಲು ‘ರಕ್ಕಿ’ ಸಿನಿಮಾ ನೋಡಬೇಕಷ್ಟೇ. ವೆಂಕಟ್ ಭಾರದ್ವಾಜ್ ಈ ಬಾರಿ ‘ರಕ್ಕಿ’ ಮೂಲಕ ಆ್ಯಕ್ಷನ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೇಲಾಗಿ, ಇದು ಯುವ ಪ್ರತಿಭೆ ರಕ್ಕಿಯನ್ನು ಸಿನಿಮಾ ರಂಗಕ್ಕೆ ಪರಿಚಯಿಸಲು ಮಾಡಿಕೊಂಡಿರುವ ಕಥೆಯಂತಿದೆ. ನಾನ್ ಲೀನಿಯರ್ ನಿರೂಪಣೆ ಪ್ರೇಕ್ಷಕರಿಗೆ ಗೊಂದಲ ಅನ್ನಿಸಬಹುದು. ಆದರೆ, ಕ್ಲೈಮ್ಯಾಕ್ಸ್ ತಿರುವುಗಳು ಗಮನ ಸೆಳೆಯುತ್ತವೆ. ನಾಯಕ ರಕ್ಕಿ ಸುರೇಶ್ ಆ್ಯಕ್ಷನ್ ಕಥೆಯ ಮೂಲಕವೇ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಡಾನ್ಸ್, ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದರೆ, ಡೈಲಾಗ್ ಡೆಲಿವರಿಯಲ್ಲಿ ಸ್ವಲ್ಪ ಸಿದ್ಧತೆ ಬೇಕಿತ್ತು ಅಂತನಿಸುತ್ತದೆ. ಪಲ್ಲವಿ ಮಂಜುನಾಥ್ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡು, ಗ್ಲಾಮರ್ ಕಳೆ ತಂದಿದ್ದಾರೆ. ಆಶಿಕಾ ಸೋಮಶೇಖರ್ ಪಾತ್ರ, ನಟನೆ ಚೆನ್ನಾಗಿದೆ. ಇನ್ನು ಉಳಿದಂತೆ, ಸಂಪತ್ ಮೈತ್ರೇಯ, ಬಿ. ಸುರೇಶ್, ಬಲ ರಾಜವಾಡಿ ಎಂದಿನಂತೆ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ.