

ಬೆಂಗಳೂರು: ‘ರೂಪಾಂತರ’ ಬಳಿಕ ನಟ ರಾಜ್ ಬಿ. ಶೆಟ್ಟಿ ನಟಿಸುತ್ತಿರುವ ಸಿನಿಮಾ ‘ರಕ್ಕಸಪುರದೋಳ್’. ‘ದಿ ವಿಲನ್’, ‘ಏಕ್ ಲವ್ ಯಾ’, ‘ಕೆಡಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ರವಿ ಸಾರಂಗ್ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆಷ್ಟೇ ನೆಟ್ಟಕಲ್ಲಪ್ಪ ಸರ್ಕಲ್‌ನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್ ಮೊದಲ ದೃಶ್ಯಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿದರು.
’ಚಿತ್ರದ ಕುರಿತು ರಾಜ್ ಶೆಟ್ಟಿ, ‘ರಕ್ಕಸಪುರದೋಳ್’ ಚಿತ್ರಕಥೆ ತುಂಬಾ ಚೆನ್ನಾಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ’ ಎಂದರು. ನಿರ್ದೇಶಕ ರವಿ ಸಾರಂಗ, ‘ರಾಕ್ಷಸರೇ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡು ಗುಣಗಳಿರುತ್ತವೆ. ಆ ಕೆಟ್ಟ ಗುಣಗಳೇ ರಕ್ಕಸ ಎನ್ನಬಹುದು. ಸದ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದರು. ರಾಜ್ ಬಿ,ಶೆಟ್ಟಿಗೆ ಸ್ವಾತಿಷ್ಟ ಕೃಷ್ಣ ಜೋಡಿಯಾಗಿದ್ದಾರೆ. ನಟ ಬಿ.ಸುರೇಶ್, ಅರ್ಚನಾ ಕೊಟ್ಟಿಗೆ, ಗೌರವ್ ಶೆಟ್ಟಿ, ಸಿದ್ದಣ್ಣ, ಸುಮಾ, ಅನಿರುದ್ಧ ಭಟ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕ್ರಾಂತಿ ಕುಮಾರ್, ನರಸಿಂಗ್ ಜಾಲಹಳ್ಳಿ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೊಹನ್ ಬಿ. ಕೆರೆ ಕಲಾ ನಿರ್ದೇಶನ ಇರಲಿದೆ. ಸಾಹಸ ನಿರ್ದೇಶಕ ಕೆ. ರವಿವರ್ಮ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.‘ಚಿತ್ರದ ಕುರಿತು ರಾಜ್ ಶೆಟ್ಟಿ, ‘ರಕ್ಕಸಪುರದೋಳ್’ ಚಿತ್ರಕಥೆ ತುಂಬಾ ಚೆನ್ನಾಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ’ ಎಂದರು. ನಿರ್ದೇಶಕ ರವಿ ಸಾರಂಗ, ‘ರಾಕ್ಷಸರೇ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಒಳ್ಳೆಯದು, ಕೆಟ್ಟದ್ದು ಎರಡು ಗುಣಗಳಿರುತ್ತವೆ. ಆ ಕೆಟ್ಟ ಗುಣಗಳೇ ರಕ್ಕಸ ಎನ್ನಬಹುದು. ಸದ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದರು. ರಾಜ್ ಬಿ,ಶೆಟ್ಟಿಗೆ ಸ್ವಾತಿಷ್ಟ ಕೃಷ್ಣ ಜೋಡಿಯಾಗಿದ್ದಾರೆ. ನಟ ಬಿ.ಸುರೇಶ್, ಅರ್ಚನಾ ಕೊಟ್ಟಿಗೆ, ಗೌರವ್ ಶೆಟ್ಟಿ, ಸಿದ್ದಣ್ಣ, ಸುಮಾ, ಅನಿರುದ್ಧ ಭಟ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕ್ರಾಂತಿ ಕುಮಾರ್, ನರಸಿಂಗ್ ಜಾಲಹಳ್ಳಿ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೊಹನ್ ಬಿ. ಕೆರೆ ಕಲಾ ನಿರ್ದೇಶನ ಇರಲಿದೆ. ಸಾಹಸ ನಿರ್ದೇಶಕ ಕೆ. ರವಿವರ್ಮ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.