ರಾಖಿ ಸಾವಂತ್​ ಬಯೋಪಿಕ್​ ನಿರ್ದೇಶನ ಮಾಡ್ತಾರಾ ರಿಷಬ್​ ಶೆಟ್ಟಿ?

rakhi sawant
Published on

ಮುಂಬೈ: ಬಾಲಿವುಡ್​​ ನಟಿ ರಾಖಿ ಸಾವಂತ್‌ ಅವರು ಸಿನಿಮಾಗಿಂತ ಕಾಂಟ್ರವರ್ಸಿ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ರಾಖಿ ಸಾವಂತ್ ಇತ್ತೀಚೆಗೆ ದಿನಕ್ಕೊಂದು ಹೊಸ ಸುದ್ದಿ ಮೂಲಕ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುವುದು ಗೊತ್ತಿರುವ ವಿಚಾರವೇ. ಆದರೆ ಇದೀಗ ನಟ, ನಿರ್ದೇಶಕ ರಿಷಬ್​​ ಶೆಟ್ಟಿ ಅವರ ಕುರಿತಾಗಿ ಮಾತನಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ತಮ್ಮ ಜೀವನದ ಕಥೆಯನ್ನು ಆಧರಿಸಿ ತಯಾರಾಗುವ ಸಿನಿಮಾಗೆ ರಿಷಬ್​ ಶೆಟ್ಟಿ ನಿರ್ದೇಶನ ಮಾಡಬೇಕು ಎಂದು ಹೇಳಿದ್ದಾರೆ. ಅವರ ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟಿ, ರಾಖಿ ಸಾವಂತ್​ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್​ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್​ ಮಾಡಿದರೆ ಉತ್ತಮ. ‘ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ’ ಎಂದು ನಿರ್ಮಾಪಕರು ಹೇಳಿದ್ದಾರೆ. ‘ಆ ಬಗ್ಗೆ ನಾನು ಯೋಚಿಸಿಲ್ಲ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ. ರಾಖಿ ಸಾವಂತ್ ಅವರ ಸಿನಿಮಾವನ್ನು ಯಾರು ನಿರ್ದೇಶನ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ.

ಯಾರು ನಿರ್ದೇಶನ ಮಾಡಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಖಿ, ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್​ ಶೆಟ್ಟಿ ಹೆಚ್ಚು ಇಷ್ಟ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಇದಕ್ಕೆ ರಿಷಬ್ ಶೆಟ್ಟಿ ಅವರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net