VIDEO | ಇನ್ಮುಂದೆ ನನ್ನ ಫಾತಿಮಾ ಅಂತಾ ಕರೆಯಿರಿ ಎಂದ ಬಾಲಿವುಡ್​​ ನಟಿ ರಾಖಿ ಸಾವಂತ್​

rakhi
Published on

ಮುಂಬೈ: ಬಾಲಿವುಡ್​​ ನಟಿ ರಾಖಿ ಸಾವಂತ್ ಮೆಕ್ಕಾದ ಉಮ್ರಾ ಯಾತ್ರೆಯಿಂದ ವಾಪಸ್ಸಾಗಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ, ‘ನನ್ನನ್ನು ರಾಖಿ ಎಂದು ಕರೆಯಬೇಡಿ ಇನ್ಮುಂದೆ ನನ್ನ ಹೆಸರು ಫಾತಿಮಾ’ ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ರಾಖಿ ಸಾವಂತ್ ಅವರು ಉಮ್ರಾದಿಂದ ಹಿಂತಿರುಗಿದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತವನ್ನು ಪಡೆದರು. ಈ ವೇಳೆ ರಾಖಿ ಸಾವಂತ್​ ಬಿಳಿ ಬಣ್ಣದ ಬುರ್ಕಾ ಧರಿಸಿದ್ದರು. ರಾಖಿ ಬದಲು ಫಾತಿಮಾ ಎಂದು ಕರೆಯುವಂತೆ ಪಾಪರಾಜಿಗೆ ನಟಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ರಾಖಿ ಮಾತಾನಾಡಿದ್ದಾರೆ. ಮೆಕ್ಕಾದ ಉಮ್ರಾ ಯಾತ್ರೆಯ ಬಗ್ಗೆ ಅನುಭವವನ್ನು ತಿಳಿಸಿದ್ದಾರೆ.

‘ದೇವರಿಗೆ ನಾನು ಇರುವ ಹಾಗೆಯೇ ಇಷ್ಟ. ಅದಕ್ಕಾಗಿ ಯಾವುದೇ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ. ಆದರೆ ಇನ್ಮುಂದೆ ಫಾತಿಮಾ ಎಂದು ಕರೆಯಿರಿ ಎಂದಿದ್ದಾರೆ.

ಮೆಕ್ಕಾ ಭೇಟಿಯ ಹಲವು ವಿಡಿಯೋಗಳನ್ನು ರಾಖಿ ಹಂಚಿಕೊಂಡಿದ್ದಾರೆ. ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net