3ನೇ ಮದುವೆಗೆ ಸಿದ್ಧವಾದ ನಟಿ ರಾಖಿ ಸಾವಂತ್​! Rakhi Sawant ಮನಸ್ಸು ಕದ್ದ ಪಾಕ್ ಯುವಕ

Rakhi Sawant - Final
Published on

ಮುಂಬೈ:  ( Rakhi Sawant  ) ರಾಖಿ ಸಾವಂತ್ ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರಂತೆ.ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಕಿಸ್ತಾನದಿಂದ ಮದುವೆಯ ಪ್ರಸ್ತಾಪಗಳು ಬರುತ್ತಿವೆ. ಸಮಯ ಬಂದಾಗ ಇಷ್ಟವಾಗುವ ಒಬ್ಬರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳುವ ಮೂಲಕವಾಗಿ ರಾಖಿ ಮೂರನೇ ಮದ್ವೆಗೆ ಸಿದ್ಧವಾಗಿರುವ ಕುರಿತಾಗಿ ಹೇಳಿಕೊಂಡಿದ್ದಾಳೆ.

ರಾಖಿ ಸಾವಂತ್ ಈ ಹಿಂದೆ ಎರಡು ಮದುವೆಗಳನ್ನು ಮಾಡಿಕೊಂಡಿದ್ದಾರೆ. ರಾಖಿಯ ಮೊದಲ ಮದುವೆ ರಿತೇಶ್ ಸಿಂಗ್ ಜೊತೆ. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.. ಇದಾದ ನಂತರ, ರಾಖಿ ಸಾವಂತ್ ಆದಿಲ್ ಖಾನ್ ದುರಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ನಂತರ ರಾಖಿ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ದೂರವಾದರು. ಈಗ ಮತ್ತೆ ರಾಖಿ ಸಾವಂತ್​ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿ, “ನನಗೆ ಹಲವು ಪ್ರಪೋಸ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಿ ಜನರನ್ನು ಪ್ರೀತಿಸುತ್ತೇನೆ ಮತ್ತು ಅಲ್ಲಿ ನನಗೆ ಅನೇಕ ಅಭಿಮಾನಿಗಳಿದ್ದಾರೆ ಅನೇಕ ಪಾಕಿಸ್ತಾನಿ ಮತ್ತು ಭಾರತೀಯ ಜೋಡಿಗಳು ಮದುವೆಯಾಗಿ ಅಮೆರಿಕ ಮತ್ತು ದುಬೈನಲ್ಲಿ ನೆಲೆಸಿದ್ದು, ಉತ್ತಮ ಜೀವನ ನಡೆಸುತ್ತಿದ್ದಾರೆ. ಈ ರೀತಿಯ ವಿವಾಹವು ಎರಡು ದೇಶಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ಭಾರತೀಯರು ಮತ್ತು ಪಾಕಿಸ್ತಾನಿಗಳು ಪರಸ್ಪರ ಒಪ್ಪಿಗೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾನು ಪಾಕಿಸ್ತಾನದ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತೇನೆ" ಎಂದಿದ್ದಾರೆ..

ಆತ ನಟ ಮತ್ತು ಪೊಲೀಸ್ ಅಧಿಕಾರಿ. ಮದುವೆ ಪಾಕಿಸ್ತಾನದಲ್ಲಿ ನಡೆಯಲಿದೆ. ಆರತಕ್ಷತೆ ಭಾರತದಲ್ಲಿ ಇರುತ್ತದೆ ಮತ್ತು ನಮ್ಮ ಹನಿಮೂನ್‌ಗಾಗಿ ನಾವು ಸ್ವಿಟ್ಜರ್ಲೆಂಡ್ ಅಥವಾ ನೆದರ್‌ಲ್ಯಾಂಡ್‌ಗೆ ಹೋಗುತ್ತೇವೆ. ನಾವು ದುಬೈನಲ್ಲಿ ನೆಲೆಸುತ್ತೇವೆ ಎಂದು ನಟಿ ಹೇಳಿದ್ದಾರೆ.

ಹುಡುಗ ಯಾರು ಎಂಬ ಚರ್ಚೆಜೋರಾಗಿದೆ. ಹೌದು ವರದಿಯ ಪ್ರಕಾರ ರಾಖಿ ಸಾವಂತ್‌ ದೋಡಿ ಖಾನ್ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಜನಪ್ರಿಯ ನಟ, ಮಾಡೆಲ್‌‌ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net