ಹಾಸಿಗೆ ಹಿಡಿದಿರುವ ರಾಖಿ ಸಾವಂತ್‌ಗೆ ಕೊಲೆ ಬೆದರಿಕೆ; ಮೈಸೂರಿನ ಆದಿಲ್ ಬಗ್ಗೆ ಸುಳಿವು ನೀಡಿದ್ರಾ ರಾಖಿ ಮಾಜಿ ಪತಿ ರಿತೇಶ್!

Rakhi Sawant
Published on

ಮುಂಬೈ: ಬಾಲಿವುಡ್​​ ನಟಿ ರಾಖಿ ಸಾವಂತ್​  ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ  ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದುಕೊಂಡು ಈಗ ತಾನೆ ಚೇತರಿಸಿಕೊಳ್ಳುತಿದ್ದಾರೆ. ಆದರೆ ನಟಿಗೆ ಈಗ ಕೊಲೆ ಬೆದರಿಕೆ ಇದೆ ಅಂತೆ. ಈ ಕುರಿತಾಗಿ ರಾಖಿ ಮಾಜಿ ಪತಿ ರಿತೇಶ್​​ ಹೇಳಿದ್ದಾರೆ.

ರಾಖಿ ಸಾವಂತ್ ಇತ್ತೀಚೆಗೆ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ರಾಖಿಯನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಲಾಯಿತು, ಇದು ನಟಿಯ ಗರ್ಭಾಶಯದಲ್ಲಿ ಗೆಡ್ಡೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ರಾಖಿಯ ಕಷ್ಟದ ದಿನಗಳಲ್ಲಿ ರಾಖಿಯ ಮಾಜಿ ಪತಿ ರಿತೇಶ್ ಸಿಂಗ್ ಮತ್ತು ಸಹೋದರ ಅವರೊಂದಿಗೆ ಇದ್ದಾರೆ. ರಾಖಿಗೆ ಆಪರೇಷನ್ ಮಾಡಲಾಗಿದೆ ಮತ್ತು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. 3 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ರಾಖಿಯ ಗರ್ಭಾಶಯದಿಂದ ಗಡ್ಡೆಯನ್ನು ಹೊರತೆಗೆಯಲಾಗಿದೆ ಎಂದು ರಿತೇಶ್ ಹೇಳಿದ್ದಾರೆ. ರಿತೇಶ್ ರಾಖಿಯ ಎರಡನೇ ಮಾಜಿ ಪತಿ ಆದಿಲ್ ಖಾನ್ ದುರಾನಿ ವಿರುದ್ಧ  ಕೆಲವು ಆರೋಪಗಳನ್ನು ಮಾಡಿದ್ದಾರೆ.

ರಿತೇಶ್ ಕೆಲವು ಪಾಪರಾಜಿಗಳೊಂದಿಗೆ ಮಾತನಾಡುವ ವೇಳೆ, ಕೆಲವರು ರಾಖಿಗೆ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ರಾಖಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ರಿತೇಶ್ ಹೇಳಿದ್ದಾರೆ. ಅವರು ಯಾರು ಮತ್ತು ಅವರು ರಾಖಿಗೆ ಏಕೆ ಕಿರುಕುಳ ನೀಡುತ್ತಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ವ್ಯಕ್ತಿಯ ವಿರುದ್ಧ ಎಲ್ಲಾ ಸಾಕ್ಷ್ಯಗಳನ್ನು ಪಡೆಯುವವರೆಗೂ ಅವರ ಹೆಸರನ್ನು ಉಲ್ಲೇಖಿಸಲು ನಿರಾಕರಿಸಿದರು.

'ನಾನು ಎಲ್ಲವನ್ನೂ ಹೇಳುತ್ತೇನೆ, ಮೊದಲು ನನಗೆ ಎಲ್ಲಾ ಸಾಕ್ಷ್ಯಗಳನ್ನು ಪಡೆಯುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ. ನಾನು ಯಾರೊಬ್ಬರ ಹೆಸರನ್ನು ತೆಗೆದುಕೊಳ್ಳುತ್ತೇನೆ ಆದರೆ ಮೊದಲು ನನಗೆ ಸಾಕ್ಷ್ಯವನ್ನು ಪಡೆಯಲು ಅವಕಾಶ ಮಾಡಿಕೊಡಿ. ನಮ್ಮ ಹಿತೈಷಿಗಳೆಂದು ಬಿಂಬಿಸಿಕೊಂಡ ಕೆಲವರು ಈ ವಿವಾದದಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ವ್ಯಕ್ತಿ ಯಾರೆಂದು ಶೀಘ್ರದಲ್ಲೇ ಹೇಳುತ್ತೇನೆ. ಈ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದೇವೆ. ಇದು ರಾಖಿಯ ಸುರಕ್ಷತೆಗೆ ಸಂಬಂಧಿಸಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net