

ನವದೆಹಲಿ: 2020ರಲ್ಲಿ ದೇಶದ ಗಮನ ಸೆಳೆದಿದ್ದ, ರೈತರ ಚಳವಳಿ ಮುನ್ನಡೆಸಿದ್ದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ರನ್ನು ಭಾನುವಾರ ಸಂಟನೆಯಿಂದ ಉಚ್ಚಾಟಿಸಲಾಗಿದೆ.
ಬಿಕೆಯು ರಾಷ್ಟ್ರೀಯ ಅಧ್ಯಕ್ಷನಾಗಿರುವ ರಾಕೇಶ್ ಅಣ್ಣ ನರೇಶ್ ಟಿಕಾಯತ್ರನ್ನು ಕೂಡ ಸಂಟನೆಯಿಂದ ಹೊರ ಹಾಕಲಾಗಿದೆ. ಟಿಕಾಯತ್ ಸಹೋದರರು "ರಾಜಕೀಯ' ಮಾಡುತ್ತಿದ್ದು "ಒಂದು ರ್ನಿದಿಷ್ಟ ರಾಜಕೀಯ ಪಕ್ಷದ ಹಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ರೈತ ನಾಯಕರು ಆರೋಪಿ ಸಿದ್ದು ಅವರನ್ನು ಸಂಟನೆಯಿಂದ ಹೊರಹಾಕಲು ಕಾರಣ ಎಂದಿದ್ದಾರೆ. ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ ಟಿಕಾಯತ್ರನ್ನು ಹೊರ ಹಾಕುವುದರೊಂದಿಗೆ ಬಿಕೆಯು ಎರಡು ಹೋಳಾಗಿದೆ.
ರಾಜೇಶ್ ಸಿಂಗ್ ಹೊಸ ಸಾರಥಿ: ಉಚ್ಚಾಟಿತ ನರೇಶ್ ಟಿಕಾಯತ್ ಸ್ಥಾನಕ್ಕೆ ರೈತ ನೇತಾರ ರಾಜೇಶ್ ಸಿಂಗ್ ಚೌಹಾಣ್ರನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಕೆಯು (ರಾಜಕೀಯರಹಿತ) ಸಂಟನೆಯ ನೂತನ ಮುಖ್ಯಸ್ಥರಾಗಿ ನೇಮಿಸಲಾಗಿದೆ.
ಶನಿವಾರ ನಡೆದ ಮಹತ್ವದ ಸಭೆಯಲ್ಲಿ ಟಿಕಾಯತ್ ಸೋದರರನ್ನು ಉಚ್ಚಾಟಿಸಿ ತಮ್ಮನ್ನು ಹೊಸ ನೇತಾರರಾಗಿ ನೇಮಿಸಲಾಯಿತು ಎಂದು ಬಿಕೆಯು (ಎ) ಮುಖಂಡ ಚೌಹಾಣ್ ತಿಳಿಸಿದ್ದಾರೆ. "ರಾಕೇಶ್ ಅಥವಾ ನರೇಶ್ ಟಿಕಾಯತ್ ಬಗ್ಗೆ ನಾವು ಏನನ್ನೂ ಹೇಳುವುದಿಲ್ಲ. ಅವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ' ಎಂದು ಚೌಹಾಣ್ ಹೇಳಿದ್ದಾರೆ. ಪಕ್ಷಗಳ ಪರ ಪ್ರಚಾರ: ಸುಮಾರು ಒಂದು ವರ್ಷದಷ್ಟು ದೀರ್ ಸಮಯ ನಡೆಸಿದ ಹೋರಾಟದ ಲವಾಗಿ ಕೇಂದ್ರ ಸರ್ಕಾರ ಮೂರೂ ಕೃಷಿ ಕಾನೂನುಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಚಳವಳಿ ಣಗೊಂಡ ಮೇಲೆ ರಾಕೇಶ್ ಟಿಕಾಯತ್ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ನಡೆಸುತ್ತಿದ್ದುದು ಕಂಡು ಬಂದಿತ್ತು. ಟಿಕಾಯತ್ರ ರಾಜಕೀಯ ಪಕ್ಷಗಳ ಪರ ನಿಲುವು ರೈತ ಸಮುದಾಯದ ಆಕ್ಷೇಪಕ್ಕೆ ಒಳಗಾಗಿತ್ತು. 2021 ಮಾರ್ಚ್ನಲ್ಲಿ ಬಂಗಾಳದ ನಂದಿಗ್ರಾಮ ಮತ್ತು ಕೋಲ್ಕತದಲ್ಲಿ ಆಳುವ ತೃಣ ಮೂಲ ಕಾಂಗ್ರೆಸ್ ಪರವಾಗಿ ರಾಕೇಶ್ ಪ್ರಚಾರ ನಡೆಸಿದ್ದರು. ಹೀಗಾಗಿ, ಟಿಕಾಯತ್ ನೇತೃತ್ವದ ರೈತ ಚಳವಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲವಿತ್ತು ಎಂದು ಬಿಜೆಪಿ ಆರೋಪಿಸಿತ್ತು. ಅವರ ಹಿರಿಯ ಸಹೋದರ ನರೇಶ್ ಟಿಕಾಯತ್ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ&ರಾಷ್ಟ್ರೀಯ ಲೋಕದಳ ಮೈತ್ರಿಕೂಟ ಅಭ್ಯರ್ಥಿಗಳಿಗೆ ರಾಜ್ಯದ ಮತದಾರರು ಬೆಂಬಲಿಸುವರೆಂಬ ಆಶಯ ವ್ಯಕ್ತಪಡಿಸಿದ್ದರು.
ಬಿಕೆಯುವನ್ನು ಒಂದು ರಾಜ ಕೀಯ ಅಡ್ಡೆಯನ್ನಾಗಿ ಮಾಡಲಾಗಿತ್ತು. ಅದು ರಾಜಕೀಯದಿಂದ ಸ್ಫೂರ್ತಿ ಪಡೆದಿತ್ತು. | ರಾಜೇಶ್ ಸಿಂಗ್ ಚೌಹಾಣ್ ಬಿಕೆಯು (ಎ) ಮುಖ್ಯಸ್ಥ