

ಮುಂಬೈ: ಬಾಲಿವುಡ್ನ ಹೆಸರಾಂತ ನಟ, ಬಹುಮುಖ ಪ್ರತಿಭೆ ರಾಜ್‌ಕುಮಾರ್ ರಾವ್ ಸದ್ಯ ವದಂತಿಗಳ ಅಲೆಯಲ್ಲಿ ಸಿಲುಕಿದ್ದು, ನಟನ ಮುಖವು ಪ್ಲಾಸ್ಟಿಕ್ ಸರ್ಜರಿಯಿಂದಲೇ ಕೂಡಿದೆ ಎಂಬ ಆರೋಪಗಳು ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿತ್ತು. ಸದ್ಯ ಈ ಬಗ್ಗೆ ಕಡೆಗೂ ಪ್ರತಿಕ್ರಿಯಿಸಿರುವ ರಾವ್, ಇದಕ್ಕೆಲ್ಲಾ ಏನು ಕಾರಣ? ಇದು ನಿಜವೇ ಎಂಬುದರ ಕುರಿತು ಅಸಲಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮುಕ್ತವಾಗಿ ಹಲವು ವಿಷಯಗಳ ಬಗ್ಗೆ ಮಾತನಾಡಿದ ರಾಜ್‌ಕುಮಾರ್ ರಾವ್, "ಪ್ಲಾಸ್ಟಿಕ್ ಸರ್ಜರಿ ಆರೋಪವನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೀನಿ. ಯಾಕಂದ್ರೆ ನಾನ್ಯಾವುದೇ ರೀತಿಯ ಸರ್ಜರಿಗೆ ಒಳಪಟ್ಟಿಲ್ಲ, ಅದರ ಮೊರೆ ಹೋಗಿಯೂ ಇಲ್ಲ. ಆ ಫೋಟೋ ನೋಡಿದವರಿಗೆ ಬಹುಶಃ ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿರಬೇಕು ಎಂದು ಅನಿಸಿರಬೇಕು. ಆದ್ದರಿಂದ ಈ ರೀತಿ ಅಭಿಪ್ರಾಯಿಸಿದ್ದಾರೆ. ಅದೊಂದೇ ಫೋಟೋ ಹಾಗಿದೆ ಅಷ್ಟೇ, ಉಳಿದ ಯಾವುದೇ ಛಾಯಾಚಿತ್ರಗಳಲ್ಲಿಯೂ ಸಹ ಆತರ ಇಲ್ಲ, ಗಮನಿಸಿ ನೋಡಿ" ಎಂದಿದ್ದಾರೆ.
"ಅದರಲ್ಲಿ ನನ್ನ ಗಲ್ಲ ತುಂಬ ಸಣ್ಣ ಕಾಣಿಸುತ್ತದೆ, ಯಾಕಂದ್ರೆ ನನ್ನ ತ್ವಚೆ ಅಷ್ಟು ಚೆನ್ನಾಗಿರುವುದು ಪೋಟೋದಲ್ಲಿ ಕಂಡುಬಂದಿದೆ. ನನಗೂ ನೋಡುಗರಷ್ಟೇ ಅಚ್ಚರಿ ಉಂಟಾಯಿತು. ಶೂಟಿಂಗ್ ಮುಗಿದ ಬಳಿಕವು ಮೇಕಪ್ ಇಲ್ಲದೆ ಹೇಗೆ ನನ್ನು ಮುಖ ಅಷ್ಟೊಂದು ಸುಂದರವಾಗಿ ಕಾಣಿಸಿತು ಎಂಬ ಅಚ್ಚರಿ ನನ್ನಲ್ಲಿಯೂ ಮೂಡಿತು. ಪ್ರಾರಂಭದಲ್ಲಿ ನನ್ನ ಅಂದ-ಚೆಂದದ ಬಗ್ಗೆ ಮಾತುಗಳು ಕೇಳಿಬರುತ್ತಿತ್ತು. ಈ ಕಾರಣಕ್ಕೆ ಎಂಟು ವರ್ಷಗಳ ಹಿಂದೆ ನನ್ನ ಗಲ್ಲಕ್ಕೆ ನಾನೇ ಫಿಲರ್ಸ್ ಬಳಸಿ ಟಚ್ ಅಪ್ ಮಾಡಿಕೊಂಡಿದ್ದೆ. ಅದು ಕೇವಲ ಅರ್ಧ ಗಂಟೆಯ ಕೆಲಸವಷ್ಟೇ" ಎಂದರು.
ಇದನ್ನೂ ಓದಿ: ಮತದಾನ-ಚುನಾವಣೆ ಒಂದೇ ನಾಣ್ಯದ ಎರಡು ಮುಖ
"ಇದೆಲ್ಲಾ ಮಾಡಿಕೊಂಡಿದ್ದು, ಕೇವಲ ನನ್ನ ಆತ್ಮವಿಶ್ವಾಸಕ್ಕಾಗಿ ಮಾತ್ರ. ನಾನಿನ್ನು ಚೆನ್ನಾಗಿ ಕಾಣಿಸುತ್ತೇನೆ ಎಂಬ ನಂಬಿಕೆ. ಇದರಿಂದ ನನ್ನಲ್ಲಿ ಏನಾದರೂ ಬದಲಾವಣೆ ಆಗಿದ್ಯಾ? ಇಲ್ವೇ ಇಲ್ಲ" ಎಂದು ಹೇಳುವ ಮೂಲಕ ಕಡೆಗೂ ವದಂತಿಗಳಿಗೆ ತೆರೆ ಎಳೆದಿದ್ದಾರೆ,(ಏಜೆನ್ಸೀಸ್).