ಮೈಸೂರಿನಲ್ಲಿ ರಾಜೀವ್ ತಾರಾನಾಥ್, ನ.ರತ್ನ ಸ್ಮರಣೆ ಕಾರ್ಯಕ್ರಮ

Rajiv Taranath and na. Ratna Remembrance Program in Mysore
Published on

ಮೈಸೂರು: ಧ್ವನಿ ಫೌಂಡೇಷನ್ ವತಿಯಿಂದ ಬುಧವಾರ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಸರೋದ್ ವಾದಕ ದಿ. ರಾಜೀವ್ ತಾರಾನಾಥ್ ಮತ್ತು ರಂಗಕರ್ಮಿ ದಿ. ನ.ರತ್ನ ಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ ಮಾತನಾಡಿ, ರಾಜೀವ ತಾರನಾಥ್ ಅವರು ತಾವು ಕಲಿತ ಸಂಗೀತವನ್ನು ಎಲ್ಲರಿಗೂ ಕಲಿಸುತ್ತಿದ್ದರು. ಸಂಗೀತ ಕಲಿಯಲು ಬಂದವರಿಗೆ ಉಚಿತವಾಗಿ ಹೇಳಿಕೊಡುತ್ತಿದ್ದರು. ಪಂಡಿತ್ ತಾರಾನಾಥ ಫೌಂಡೇಷನ್ ಮೂಲಕ ನಗರದಲ್ಲಿ ನೂರಾರು ಸಂಗೀತ ಕಛೇರಿಗಳನ್ನು ಆಯೋಜಿಸಿದ್ದರು. ದೇಶದ ಯುವ ಸಂಗೀತಗಾರರನ್ನು ಸಂಗೀತ ಕಛೇರಿಗೆ ಆಹ್ವಾನಿಸಿ ಹೆಚ್ಚಿನ ಗೌರವಧನ ನೀಡುತ್ತಿದ್ದರು. ರಾಜೀವ್ ತಾರಾನಾಥ್ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಇಂಗ್ಲಿಷ್ ಸಾಹಿತ್ಯದ ಕೃತಿಗಳನ್ನು ಅವರು ಬಹಳ ಆಸಕ್ತಿಯಿಂದ ಓದುತ್ತಿದ್ದರು. ವಿಶ್ವ ಸಾಹಿತ್ಯದ ಬಗ್ಗೆ ಅವರು ಸಾಕಷ್ಟು ತಿಳಿದುಕೊಂಡಿದ್ದರು. ಕೇವಲ ಇಂಗ್ಲಿಷ್ ಮಾತ್ರವಲ್ಲದೆ ಸಾಕಷ್ಟು ಕನ್ನಡದ ಕೃತಿಗಳನ್ನು ಓದುತ್ತಿದ್ದರು. ಕನ್ನಡ ಲೇಖಕರು ಪುಸ್ತಕ ಕಳುಹಿಸಿದರೆ ಓದಿ ಅಭಿಪ್ರಾಯ ತಿಳಿಸುತ್ತಿದ್ದರು ಎಂದರು.

ರಂಗಭೂಮಿಗೆ ನ.ರತ್ನ ಅವರು ಅನನ್ಯವಾದ ಕೊಡುಗೆ ನೀಡಿದ್ದಾರೆ. ಬುದ್ಧಿಜೀವಿಯಾಗಿದ್ದ ನ.ರತ್ನ ಅವರು ಹೊಸ ವಿಷಯಗಳನ್ನು ಕಲಿಯುವ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದರು ಎಂದು ಹೇಳಿದರು.

ಲೇಖಕಿ ಶೈಲಜಾ ಗೋಪಾಲ್, ಸುಗಮ ಸಂಗೀತ ಕಲಾವಿದೆ ಎಚ್.ಆರ್. ಲೀಲಾವತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಧ್ವನಿ ಫೌಂಡೇಷನ್ ಸಂಸ್ಥಾಪಕರಾದ ಡಾ. ಶ್ವೇತಾ ಮಡಪ್ಪಾಡಿ ಹಾಗೂ ಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net