ಲ್ಯಾಂಬೋರ್ಗಿನಿಯಲ್ಲಿ ಸೂಪರ್​ಸ್ಟಾರ್​ ರಜನಿ ಸವಾರಿ; ಅಭಿಮಾನಿಗಳಿಗೆ ನೀಡಿದ ಸಂದೇಶವೇನು?

Rajanikanth- Ferrari
Published on

ಚೆನ್ನೈ: ಲಾಕ್​ಡೌನ್​ ಸಮಯದಲ್ಲಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಚಿತ್ರನಟರೆಲ್ಲ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ.

ಅಂತೆಯೇ ಸೂಪರ್​ಸ್ಟಾರ್​ ರಜನಿಕಾಂತ್​ ಫೋಟೋವೊಂದು ಭಾರಿ ವೈರಲ್​ ಆಗಿದೆ. ಅಭಿಮಾನಿಗಳ ಹರ್ಷವಂತೂ ಮೇರೆ ಮೀರಿದೆ. ಒಬ್ಬರಂತೂ ಫೋಟೋ ಕ್ಲಿಕ್​ ಮಾಡಿ ಲಕ್ಷಾಂತರ ಜನರಲ್ಲಿ ಹರ್ಷವನ್ನುಂಟು ಮಾಡಿದವರು ನಿಜಕ್ಕೂ ಭಾಗ್ಯವಂತರು ಎಂದೇ ಬಣ್ಣಿಸಿದ್ದಾರೆ.

ಈ ಫೋಟೋದಲ್ಲೂ ಒಂದು ವಿಶೇಷವಿದೆ. ಐಷಾರಾಮಿ ಕಾರನ್ನು ಸ್ವತಃ ರಜನಿಕಾಂತ್​ ಚಲಾಯಿಸುತ್ತಿದ್ದಾರೆ. ಮತ್ತೂ ವಿಶೇಷವೆಂದರೆ ಈ ವೇಳೆ ರಜನಿಕಾಂತ್​ ಮಾಸ್ಕ್​ ಧರಿಸಿದ್ದಾರೆ. ಈ ಮೂಲಕ ಕರೊನಾ ವಿರುದ್ಧ ಹೋರಾಟಕ್ಕೆ ಮಾಸ್ಕ್​ ಬಳಸಿ ಎಂಬ ಸಂದೇಶ ನೀಡಿದ್ದಾರೆ ಸೂಪರ್​ಸ್ಟಾರ್​.

ಕೆಲವರು 'ಲಯನ್​ ರೋರಿಂಗ್​ ಇನ್​ ಲಾಂಬೋರ್ಗಿನಿ' ಎಂದು ಶೀರ್ಷಿಕೆ ನೀಡಿದ್ದಾರೆ. ಮತ್ತೊಬ್ಬರು ಮಗಳೊಂದಿಗೆ ಲ್ಯಾಂಬೋರ್ಗಿನಿಯಲ್ಲಿ ದಿನಸಿ ತರಲು ರಜನಿ ಹೊರಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​ ಟ್ವಿಟರ್​ನಲ್ಲಿ ಈಗಾಗಲೇ #LionInLamborghini ಎಂದೇ ಟ್ರೆಮಡ್​ ಆಗಿದೆ. ಜನಪ್ರಿಯ ಎನಿಸಿಕೊಳ್ಳುವುದು ಮುಖ್ಯವಲ್ಲ, ಜನಾನುರಾಗಿಯಾಗವುದರ ಜತೆಗೆ, ಜವಾಬ್ದಾರಿಯುತವಾಗಿ ಇರುವುದು ಕೂಡ ಮುಖ್ಯ ಎಂದು ಅಭಿಮಾನಿಗಳು ರಜನಿ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net