ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ ರಜನಿಕಾಂತ್

56465465
Published on

ಚಿಕ್ಕಬಳ್ಳಾಪುರ: ತಾಲೂಕಿನ ಹನುಮಂತಪುರ ಸಮೀಪದ ಈಶ ಫೌಂಡೇಷನ್​ ಆದಿಯೋಗಿ ಧ್ಯಾನ ಕೇಂದ್ರಕ್ಕೆ ನಟ ಸೂಪರ್​ ಸ್ಟಾರ್​ ರಜನಿಕಾಂತ್​ ಶುಕ್ರವಾರ ಭೇಟಿ ನೀಡಿ, ಪ್ರಾರ್ಥಿಸಿ ತೆರಳಿದ್ದಾರೆ.

ರಜನಿಕಾಂತ್ ಭೇಟಿ ಮೊದಲೇ ನಿಗದಿಯಾಗಿರಲಿಲ್ಲ. ಸಂಬಂಧಪಟ್ಟ ಸಂಸ್ಥೆಗೂ ಸೇರಿದಂತೆ ಯಾರಿಗೂ ಮಾಹಿತಿ ನೀಡದೆ, ಇದ್ದಕ್ಕಿದ್ದಂತೆ ಬಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಿ, ಸ್ಥಳಿಯರು ಗುರುತಿಸಿದಾಗಲೇ ರಜನಿಕಾಂತ್ ಬಂದಿರುವ ವಿಷಯ ಗೊತ್ತಾಗಿದೆ.

ಎಂದಿನಂತೆ ಯಾರಿಗೂ ಮಾಹಿತಿ ನೀಡದೇ ಗೌಪ್ಯವಾಗಿ ಇಷ್ಟದ ಸ್ಥಳಗಳಿಗೆ ತೆರಳಿ, ಖುಷಿ ಅನುಭವಿಸುವುದನ್ನು ರಜನಿಕಾಂತ್ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಒಂದು ವೇಳೆ ವಿಷಯ ಗೊತ್ತಾದರೆ ಜಮಾಯಿಸುವ ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟ ಎನ್ನುವ ಲೆಕ್ಕಾಚಾರ. ಅದರಂತೆ ಸಹೋದರ ಸತ್ಯನಾರಾಯಣ ರಾವ್ ಜತೆಗೆ ಕಾರಿನಲ್ಲಿ ಬಂದ ರಜನಿಕಾಂತ್​ ಕೇವಲ ಆದಿಯೋಗಿ ಧ್ಯಾನ ಕೇಂದ್ರದಲ್ಲಿ 10 ನಿಮಿಷ ಇದ್ದರು. ಆದಿಯೋಗಿ, ನಾಗಮಂಟಪವನ್ನು ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು. ಕೊನೆಗೆ ದೇವರಿಗೆ ನಮಿಸಿ, ಅಲ್ಲಿಂದ ಬೇಗನೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net