

ಚೆನ್ನೈ: ರಜನಿಕಾಂತ್ ಅವರು 'ತಲೈವರ್ 170' ಸೆಟ್‌ನಿಂದ ಅಮಿತಾಬ್ ಬಚ್ಚನ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ನಟರು ಜೊತೆಯಾಗಿರುವ ಚಿತ್ರ ಇತ್ತೀಚೆಗೆ ವೈರಲ್ ಆಗಿದೆ, ಏಕೆಂದರೆ ಅಭಿಮಾನಿಗಳು ಇಬ್ಬರೂ ನಾಯಕ ನಟರನ್ನು ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂದಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಇನ್ನು 33 ವರ್ಷದ ನಂತರ ನಾನು ನನ್ನ ಮಾರ್ಗದರ್ಶಕ, ನನ್ನ ಗುರು ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ" ಎಂದು ರಜನಿಕಾಂತ್ ಸಂತಸ ಹಂಚಿಕೊಂಡಿದ್ದಾರೆ. 'ತಲೈವರ್ 170' ಶೀರ್ಷಿಕೆಯಡಿ ನಿರ್ದೇಶಕ ಟಿಜೆ ಜ್ಞಾನವೇಲ್ ಚಿತ್ರದ ಇತ್ತೀಚಿನ ಶೆಡ್ಯೂಲ್ ಮುಂಬೈನಲ್ಲಿ ನಡೆಸುತ್ತಿದ್ದಾರೆ. ರಜನಿಕಾಂತ್ ಅವರು ಚಿತ್ರದಲ್ಲಿ ಸುದೀರ್ಘ ವಿರಾಮದ ನಂತರ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ. ಹೀಗಾಗಿ ಅಮಿತಾಬ್ ಅವರೊಂದಿಗಿನ ತಮ್ಮ ಚಿತ್ರವನ್ನು ಸೆಟ್‌ನಿಂದ ಹಂಚಿಕೊಂಡಿದ್ದಾರೆ.
"ನನ್ನ ಹೃದಯವು ಸಂತೋಷದಿಂದ ಮಿಡಿಯುತ್ತಿದೆ" ಎಂದು ರಜನಿಕಾಂತ್ ಬರೆದುಕೊಂಡಿದ್ದಾರೆ. ಇಬ್ಬರು ಹಿರಿಯ ನಟರು ಒಟ್ಟಿಗೆ ಇರುವ ಚಿತ್ರವು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಅಮಿತಾಬ್ ಬಚ್ಚನ್ ಕೂಲ್ ಸ್ವೆಟ್‌ಶರ್ಟ್ ಧರಿಸಿ ಕಾಣಿಸಿಕೊಂಡಿದ್ದರೆ, ರಜನಿಕಾಂತ್ ಮಾಮೂಲನಂತೆ ಬಿಳಿ ಬಣ್ಣದ ಷರ್ಟ್ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.