ಗಣಪತ್ ಕಲೆಕ್ಷನ್​​ ಡೌನ್​​: ಟೈಗರ್ ಶ್ರಾಫ್ - ಕೃತಿ ಸನೋನ್ ಸಿನಿಮಾಗೆ ನೀರಸ ಪ್ರತಿಕ್ರಿಯೆ..!

tiger
Published on

Ganapath collection: ಬಹುನಿರೀಕ್ಷಿತ ಗಣಪತ್ ಸಿನಿಮಾ ಸಾಧಾರಣ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಗಣ್​​​ಪತ್​​ ಸಿನಿಮಾದಲ್ಲಿ ನಾಯಕನಾಗಿ ಟೈಗರ್​​ ಶ್ರಾಫ್​ ಮತ್ತು ನಾಯಕಿಯಾಗಿ ಕೃತಿ ಸೆನಾನ್​ ನಟಿಸಿದ್ದಾರೆ.

ಭಾರೀ ಪ್ರಚಾರದ ನಡುವೆಯೂ 'ಗಣಪತ್' ಚಿತ್ರ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ಈ ಚಿತ್ರ ಆರಂಭಿಕ ದಿನದಲ್ಲಿ ಭಾರತದಲ್ಲಿ ಕೇವಲ 2.50 ಕೋಟಿ ಗಳಿಸಿದ್ದು, ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.


ಚಿತ್ರದ ಐದು ದಿನದ ಒಟ್ಟು ಕಲೆಕ್ಷನ್ 9.80 ಕೋಟಿ ರೂ. ಅಕ್ಟೋಬರ್ 24 ರಂದು 'ಗಣಪತ್' ಶೇಕಡಾ 12.28 ರಷ್ಟು ಬುಕ್ಕಿಂಗ್ಸ್​​ ಕಂಡು ಬಂದಿದೆ.
ಕಳೆದ ಮೂರು ದಿನಗಳಿಂದ ಚಿತ್ರ ಥಿಯೇಟರ್‌ಗಳಲ್ಲಿ ಯಾವುದೇ ಬೆಳವಣಿಗೆಯಿಲ್ಲದೆ ನಿಂತಿದ್ದು, ಜನರು ಬರುವ ನಿರೀಕ್ಷೆಗಳು ಹುಸಿಯಾಗಿವೆ.

ಅಕ್ಟೋಬರ್ 22 ರಂದು ಚಿತ್ರ 2.25 ಕೋಟಿ ಗಳಿಸಿದೆ. ಹೀಗಾಗಿ ಮೂರು ದಿನಗಳಲ್ಲಿ ಕೇವಲ 7 ಕೋಟಿ ರೂಪಾಯಿ ಗಳಿಸುವ ಮೂಲಕ ಅತೀ ಕಡಿಮೆ ಸಂಗ್ರಹಿಸಿದೆ.


5 ದಿನದಲ್ಲಿ 10 ಕೋಟಿ ಗಳಿಕೆ ಮಾಡೋದಕ್ಕೂ ಈ ಚಿತ್ರಕ್ಕೆ ಆಗದೇ ಇರೋದು ಬೇಸರದ ವಿಚಾರ. ಈ ಚಿತ್ರವು 5 ದಿನಗಳ ದಸರಾ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್ ಮಾಡುವ ಗುರಿಯನ್ನು ಹೊಂದಿದ್ದು ಇದೀಗ ಕಲೆಕ್ಷನ್​ ವಿವರವನ್ನ ಒಮ್ಮೆ ನೋಡಿದ್ರೆ, ಚಿತ್ರದ ಮೇಲಿನ ನಿರೀಕ್ಷೆಯನ್ನ ತಲುಪಿಲ್ಲ.
ಹೀರೋಪಂತಿ 2 ಕೂಡ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಈಗ ಅಮಿತಾಬ್ ಬಚ್ಚನ್, ಕೃತಿ ಸನನ್ ನಂತಹ ನಟರಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಯಾವುದೇ ಬದಲಾವಣೆ ತರೋಕೆ ಆಗುತ್ತಿಲ್ಲ.


2014 ರಲ್ಲಿ ಬಿಡುಗಡೆಯಾದ ಟೈಗರ್ ಶ್ರಾಫ್ ಅವರ ಚಿತ್ರ 'ಹೀರೋಪಂತಿಗೂ ನಾಯಕಿ ಕೃತಿ ಸನನ್. ಈ ಸಿನಿಮಾದಲ್ಲೂ ಅವರೆ ನಾಯಕಿ.

ಆದರೆ, ಈ ಚಿತ್ರವು ಬಾಕ್ಸ್​​ ಆಫೀಸ್​ನಲ್ಲಿ ಸದ್ದು ಮಾಡದೆ ಮೂಲೆ ಗುಂಪಾಗುವ ಸಾಶ್ಯತೆಗಳೇ ಹೆಚ್ಚು ಅಂತಾರೆ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರು
ನಟ ಟೈಗರ್ ಶ್ರಾಫ್ ಮುಂದೆ ರೋಹಿತ್ ಶೆಟ್ಟಿ ನಿರ್ದೇಶನದ ಅಕ್ಷಯ್ ಕುಮಾರ್ ಜೊತೆಗೆ ಬಡೇ ಮಿಯಾನ್ ಚೋಟೆ ಮಿಯಾನ್ ಸಿನಿಮಾ ಮತ್ತು ಸಿಂಗಮ್ ಎಗೇನ್ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನು ಸಿಂಗಮ್ ಎಗೇನ್ ಚಿತ್ರದಲ್ಲಿ ಟೈಗರ್​​ ಅವರ ಫಸ್ಟ್​​ ಲುಕ್​ ಕೂಡಾ ರಿವೀಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net