

ಬೆಂಗಳೂರು: ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ಹೊಸ ರಾಜಕೀಯ ಪಕ್ಷದೊಂದಿಗೆ ತಮಿಳುನಾಡು ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಿದ್ದು, ಈ ತಿಂಗಳ ಕೊನೆಗೆ ಮಹತ್ವದ ಘೋಷಣೆ ಪ್ರಕಟಿಸುವುದಾಗಿ ಡಿಸೆಂಬರ್ 3ರಂದು ತಿಳಿಸಿದ್ದರು. ಇದರ ಬೆನ್ನಿಗೇ, ಅಣ್ಣನ ಆಶೀರ್ವಾದ ಪಡೆಯುವುದಕ್ಕೆ ಅವರು ಬೆಂಗಳೂರಿಗೆ ಆಗಮಿಸಿದ್ದರು.
ರಜಿನಿಕಾಂತ್ ಅವರು ಭಾನುವಾರ ರಾತ್ರಿ ಅಣ್ಣ ಸತ್ಯನಾರಾಯಣ ರಾವ್ ಅವರ ನಿವಾಸಕ್ಕೆ ಆಗಮಿಸಿದ್ದರು. ಉಭಯಕುಶಲೋಪರಿ ಬಳಿಕ ಅಣ್ಣನ ಆಶೀರ್ವಾದವನ್ನೂ ಪಡೆದರು.ಅವರು ಆಶೀರ್ವಾದ ಪಡೆಯುತ್ತಿರುವ ಮತ್ತು ಅವರಿಗೆ ಅಣ್ಣ ಶಾಲು ಹೊದೆಸಿ ಶುಭಹಾರೈಸಿದ ಫೋಟೋಗಳು ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿವೆ.
ತಲೈವರ್ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಳ್ಳುತ್ತಿರುವ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳು ಬಹಳ ವರ್ಷಗಳಿಂದ ತವಕದೊಂದಿಗೆ ಕಾಯುತ್ತಿದ್ದಾರೆ.ಮುಂದಿನ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಅವರು, ಪಕ್ಷ ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..