ಮಾಜಿ ಸಿಎಂ ಅವರನ್ನು ಭೇಟಿಯಾದ ರಜನಿಕಾಂತ್​; ನಮ್ಮ ಸ್ನೇಹ ಮುಂದುವರೆದಿದೆ ಎಂದ ನಟ

Rajinikanth Akhilesh
Published on

ಲಖನೌ: ಉತ್ತರಪ್ರದೇಶ ಪ್ರವಾಸದಲ್ಲಿರುವ ಸೂಪರ್​ಸ್ಟಾರ್​ ರಜನಿಕಾಂತ್​ ಭಾನುವಾರ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಅಖಿಲೇಶ್​​ ಯಾದವ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹಾಗೂ ರಾಜ್ಯಪಾಲರಾದ ಆನಂದಿಬೆನ್​ ಪಟೇಲ್​ ಅವರನ್ನು ರಜನಿಕಾಂತ್​ ದಂಪತಿ ಭೇಟಿಯಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರಜನಿಕಾಂತ್​ 9 ವರ್ಷಗಳ ಹಿಂದೆ ನಾನು ಆಖಿಲೇಶ್​ರನ್ನು ಮುಂಬೈನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಅಂದಿನಿಂದ ಶುರುವಾರ ನಮ್ಮಿಬ್ಬರ ಸ್ನೇಹ ಇಂದಿಗೂ ಮುಂದುವರೆದಿದೆ. ಐದು ವರ್ಷಗಳ ಹಿಂದೆ ನಾನು ಸಿನಿಮಾ ಚಿತ್ರೀಕರಣಕ್ಕಾಗಿ ಇಲ್ಲಿಗೆ ಭೇಟಿ ನೀಡಿದ್ದೆ. ಆದರೆ, ಕಾರಣಾಂತರಗಳಿಂದ ಅಖಿಲೇಶ್​ರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ತುಂಬಾ ಖುಷಿ ನೀಡಿದೆ ಎಂದು ರಜನಿಕಾಂತ್​ ಪ್ರತಿಕ್ರಿಯಿಸಿದ್ದಾರೆ.

ರಜನಿಕಾಂತ್​ ಜೊತೆಗಿನ ಭೇಟಿಯನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅಖಿಲೇಶ್​ ಯಾದವ್​ ನಾನು ಮೈಸೂರಿನಲ್ಲಿ ಇಂಜಿನಿಯರಿಂಗ್​ ಓದುವ ಸಮಯದಲ್ಲಿ ಅವರನ್ನು ಪರದೆ ಮೇಲೆ ನೋಡಿ ಅನುಭವಿಸಿದ ಆನಂದ ಈಗಲೂ ಇದೆ. ತುಂಬಾ ವರ್ಷಗಳ ನಂತರ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ ಎಂದು ಬಣ್ಣಿಸಿದ್ದಾರೆ.

ಈ ವಾರದ ಆರಂಭದಲ್ಲಿ ರಜನಿಕಾಂತ್​ ತಮ್ಮ ಬಹುಕಾಲದ ಗೆಳೆಯ, ಜಾರ್ಖಂಡ್​ ರಾಜ್ಯಪಾಲರಾದ ಸಿ.ಪಿ. ರಾಧಾಕೃಷ್ಣನ್​ ಅವರನ್ನು ಭೇಟಿ ಮಾಡಿದ್ದರು. ರಾಚಿಯಲ್ಲಿರುವ ಯಗೋಡ ಆಶ್ರಮಕ್ಕೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net