ರಜನಿ ರಾಜಕೀಯ ಪಕ್ಷ ಘೋಷಣೆ ಇಂದು?

rajani
Published on

ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ ರಜನಿಕಾಂತ್ ಗುರುವಾರ ತಮ್ಮ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ.

ಕಳೆದ 6 ದಿನಗಳಿಂದ ರಜನಿಕಾಂತ್ ತಮ್ಮ ರಜನಿ ಮಕ್ಕಳ ಮಂದ್ರಮ್ (ಆರ್​ಎಂಎಂ)ನ ಜಿಲ್ಲಾ ಘಟಕದ ಮುಖಂಡರ ಜತೆ ನಿರಂತರವಾಗಿ ಸಭೆ ನಡೆಸಿದ್ದು, ಚೆನ್ನೈನಲ್ಲಿರುವ ತಮ್ಮ ಒಡೆತನದ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ ಎಲ್ಲರೂ ಹಾಜರಿರಬೇಕು ಎಂದು ತಾಕೀತು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net