More

    ಕರೊನಾ ಭೀತಿ: ಕುಗ್ಗಿದ ಚಿಕನ್​ ಬದಲಾಗಿ ಬೇಡಿಕೆ ಹೆಚ್ಚಾದ ಹಲಸಿನ ಬೆಲೆ ಕೇಳಿದ್ರೆ ಶಾಕ್​ ಆಗ್ತಿರಾ?

    ಲಖನೌ: ಮಾರಕ ಕರೊನಾ ವೈರಸ್​ ಭೀತಿ ಜಗತ್ತಿನೆಲ್ಲೆಡೆ ಆವರಿಸಿದೆ. ಭಾರತದಲ್ಲೂ ಕರೊನಾ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮಾಂಸ ತಿಂದರೂ ಕರೊನಾ ಸೋಂಕು ತಗುಲುತ್ತದೆ ಎಂದು ವದಂತಿ ಎಲ್ಲೆಡೆ ಹರಡಿದೆ. ಹೀಗಾಗಿ ಚಿಕನ್​ ಮತ್ತು ಮಟನ್​ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಹಲಸಿನ ಹಣ್ಣು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿದೆ.

    ಸದ್ಯ ಹಲಸಿನ ಹಣ್ಣಿನ ಬೆಲೆ ಕೆಜಿಗೆ 120 ರೂ. ಇದೆ. ಸಾಮಾನ್ಯವಾಗಿ ಕೆಜಿಗೆ 50 ರೂ. ಇರುತ್ತಿದ್ದ ಹಲಸಿನ ಹಣ್ಣು ದಿಢೀರನೇ 120 ರಷ್ಟು ಬೆಲೆ ಏರಿಕೆ ಕಂಡಿದೆ. ಸದ್ಯ ಚಿಕನ್ ಬೆಲೆ​ ಕಡಿಮೆ ಬೇಡಿಕೆಯಿಂದ ಕೆಜಿಗೆ 80 ರೂ.ನಂತೆ ಮಾರಾಟವಾಗುತ್ತಿದೆ.

    ಮಟನ್​ ಬಿರಿಯಾನಿಗಿಂತ ಹಲಸಿನಿ ಬಿರಿಯಾನಿ ತಿನ್ನುವುದು ಉತ್ತಮವಾಗಿದೆ. ಇದರ ರುಚಿಯು ಕೂಡ ಚೆನ್ನಾಗಿದೆ. ಒಂದೇ ಒಂದು ಸಮಸ್ಯೆಯೆಂದರೆ ಹಲಸಿನ ಹಣ್ಣನ್ನು ತರಕಾರಿ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡುವುದರಿಂದ ಅದನ್ನು ಪತ್ತೆ ಹಚ್ಚಲು ತುಸು ಕಷ್ಟವಾಗುತ್ತದೆ ಎಂದು ನಿಯಮಿತವಾಗಿ ರುಚಿಕರ ನಾನ್​ವೆಜ್​ ಆಹಾರವನ್ನು ಸ್ವಾದಿಸುವ ಕುಟುಂಬದ ಸದಸ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕರೊನಾ ಭೀತಿಯಿಂದ ಕುಕ್ಕುಟೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ. ಭೀತಿಯನ್ನು ಹೊರಹಾಕಿ ಮಾಂಸಾಹಾರವನ್ನು ಮತ್ತೆ ಉತ್ತೇಜಿಸುವ ದೃಷ್ಟಿಯಿಂದ ಇತ್ತೀಚೆಗಷ್ಟೇ ಗೋರಖ್​ಪುರದಲ್ಲಿ ಪೌಲ್ಟ್ರಿ ಫಾರ್ಮ್​ ಅಸೋಸಿಯೇಷನ್​ ಚಿಕನ್​ ಮೇಳವನ್ನು ಆಯೋಜಿಸಿತ್ತು.

    ಈ ವೇಳೆ ಒಂದು ಪ್ಲೇಟ್​ ಚಿಕನ್​ ಆಹಾರವನ್ನು ಕೇವಲ 30 ರೂ.ಗೆ ನೀಡಲಾಯಿತು. ಸಾವಿರಾರು ಕೆಜಿ ಚಿಕನ್​ ಆಹಾರವನ್ನು ತಯಾರಿಸಿದ್ದೇವು. ಎಲ್ಲವು ಮಾರಾಟವಾಯಿತು ಎಂದು ಪೌಲ್ಟ್ರಿ ಫಾರ್ಮ್​ ಅಸೋಸಿಯೇಷನ್ ಮುಖ್ಯಸ್ಥ ವಿನೀತ್​ ಸಿಂಗ್​ ಹೇಳಿದ್ದಾರೆ. (ಏಜೆನ್ಸೀಸ್​​)

    ನಾಯಿ ಮಾಂಸಾಹಾರ ಕುರಿತು ಜನರಿಗೆ ಶಾಕಿಂಗ್​ ಸಂದೇಶ ನೀಡಿದ ಚೀನಾ ಸಂಸ್ಥೆ!

    VIDEO| ಕರೊನಾ ವೈರಸ್​ ಕುರಿತು ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಕೆಲಸ ಕಳೆದುಕೊಂಡು ವೈದ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts