More

    ಕರೊನಾ ವೈರಸ್​ ಭೀತಿ ನಡುವೆಯೇ ನಾಯಿ ಮಾಂಸಾಹಾರ ಕುರಿತು ಜನರಿಗೆ ಶಾಕಿಂಗ್​ ಹೇಳಿಕೆ ನೀಡಿದ ಚೀನಾ ಸಂಸ್ಥೆ!

    ಬೀಜಿಂಗ್​: ತಮ್ಮ ದೇಶದ ಸಾಂಸ್ಕೃತಿಕ ವಿಶ್ವಾಸವನ್ನು ಪ್ರದರ್ಶಿಸಲು ನಾಯಿ ಮಾಂಸ ತಿನ್ನುವಂತೆ ವಿಶೇಷವಾಗಿ ನಾಯಿ ಮಾಂಸಾಹಾರ ತಯಾರಿಸುವ ಚೀನಾದ ಸಂಸ್ಥೆಯೊಂದು ಜನರನ್ನು ಉತ್ತೇಜಿಸಿದೆ.

    ಚೀನಾದ ವುಹಾನ್​ನಲ್ಲಿ ಜೀವಂತ ಪ್ರಾಣಿ ಮಾರುಕಟ್ಟೆಯಿಂದ ಸ್ಪೋಟಗೊಂಡಿದೆ ಎನ್ನಲಾದ ಕರೊನಾ ವೈರಸ್​ ಈಗಾಗಲೇ ಚೀನಾದಲ್ಲಿ ಮರಣ ಮೃದಂಗ ಬಾರಿಸಿ ಜಾಗತಿಕವಾಗಿ ಸಾವಿರಾರು ಮಂದಿಯನ್ನು ತನ್ನ ಮೃತ್ಯುಕೂಪಕ್ಕೆ ಬಲಿ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಯಿ ಮಾಂಸಕ್ಕೆ ಬ್ರೇಕ್​ ಹಾಕಲು ಕಾನೂನು ರೂಪಿಸಿ ಎಂದು ಚೀನಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಪೂರ್ವ ಚೀನಾದ ಫ್ಯಾಂಕುವೈ ಸಂಸ್ಥೆ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿದೆ.​

    ಪಾಶ್ಚಿಮಾತ್ಯರನ್ನು ಸಮಾಧಾನಪಡಿಸುವ ಪ್ರಸ್ತಾಪವನ್ನು ಶೆನ್ಜೆನ್ ನಗರದ ಜನಪ್ರತಿನಿಧಿಗಳು ರಚಿಸಿದ್ದಾರೆ ಎಂದು ಫ್ಯಾಂಕುವೈ ಸಂಸ್ಥೆ ವ್ಯಂಗ್ಯವಾಡಿದ್ದು, ಅದನ್ನು ಬಹಿಷ್ಕರಿಸಿ ಎಂದು ಜನರನ್ನು ಒತ್ತಾಯಿಸಿದೆ. ಅಲ್ಲದೆ, ನಮ್ಮ ದೇಶದ ಸಾಂಸ್ಕೃತಿ ವಿಶ್ವಾಸವನ್ನು ಸಾರಲು ನಾಯಿ ಮಾಂಸವನ್ನು ಸೇವಿಸಲು ಕಂಪನಿ ಉತ್ತೇಜಸಿದೆ.

    ಫ್ಯಾಂಕುವೈ ಸಂಸ್ಥೆ ವಿವಿಧ ರೀತಿಯ ಆಹಾರವನ್ನು ತಯಾರಿಸುತ್ತದೆ. ಅದರಲ್ಲಿ, ನಾಯಿ ಮಾಂಸದ ಚೂರುಗಳಿಂದ ತಯಾರಾದ ಆಹಾರ, ಸ್ಪೈಸಿ ನಾಯಿ ಮಾಂಸ ಮತ್ತು ಆಮೆ ಸಾರುವಿನೊಂದಿಗೆ ಮಿಶ್ರಣವಾದ ನಾಯಿ ಮಾಂಸಾಹಾರ ಸೇರಿದಂತೆ ಇನ್ನು ಅನೇಕ ಆಹಾರಗಳನ್ನು ಫ್ಯಾಂಕುವೈ ಸಂಸ್ಥೆ ತಯಾರಿಸುತ್ತದೆ.

    ಜಿಯಾಂಗ್ಸು ಪ್ರಾಂತ್ಯದ ಪೀ ಕೌಂಟಿಯಲ್ಲಿ ನೆಲೆಗೊಂಡಿರುವ ಈ ಸಂಸ್ಥೆಗೆ ಪ್ರಾಚೀನ ಚೀನಾದ ಜನರಲ್ ಫ್ಯಾಂಕುವೈ ಹೆಸರನ್ನು ಇಡಲಾಗಿದೆ. ಫ್ಯಾಂಕುವೈ ತಮ್ಮ ಆರಂಭಿಕ ವರ್ಷಗಳಲ್ಲಿ ನಾಯಿಗಳನ್ನು ಕಸಾಯಿಖಾನೆ ಮಾಡುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದರು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಮಾರಣಾಂತಿಕ ಕರೊನಾಗೆ ಸೆಡ್ಡು ಹೊಡೆದು 103 ವರ್ಷದ ಶತಾಯುಷಿ ಬದುಕುಳಿದಿದ್ದು ಹೇಗೆ?

    VIDEO| ಕರೊನಾ ವೈರಸ್​ ಕುರಿತು ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಕೆಲಸ ಕಳೆದುಕೊಂಡು ವೈದ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts